ADVERTISEMENT

'ಕಮಲದ ಮೊಗದೊಳೆ'.. ಕನ್ನಡದ ಗೀತೆ ಹಂಚಿಕೊಂಡು ನವರಾತ್ರಿ ಶುಭಾಶಯ ಕೋರಿದ ಪ್ರಧಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2025, 13:15 IST
Last Updated 26 ಸೆಪ್ಟೆಂಬರ್ 2025, 13:15 IST
   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು, ಕನ್ನಡದ ಜನಪ್ರಿಯ ಗೀತೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ದೇಶದ ಜನತೆಗೆ ನವರಾತ್ರಿ ಶುಭಾಶಯ ಕೋರಿದ್ದಾರೆ.

ಖ್ಯಾತ ಗಾಯಕಿ ಎಸ್‌. ಜಾನಕಿ ಅವರು ಹಾಡಿರುವ, 'ಕಮಲದ ಮೊಗದೊಳೆ' ಹಾಡನ್ನು ಅವರು ಎಕ್ಸ್‌ನಲ್ಲಿ ಅವರು ಪೋಸ್ಟ್‌ ಮಾಡಿದ್ದಾರೆ.

‘ನವರಾತ್ರಿಯ ಈ ಸಮಯದಲ್ಲಿ, ದೇವಿ ಎಲ್ಲಾ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಆಕೆಯ ಪ್ರೀತಿಯ ವಾತ್ಸಲ್ಯ ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ‘ ಎಂದು ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

'ಹೊಸ ಇತಿಹಾಸ' ಚಿತ್ರದ 'ಕಮಲದ ಮೊಗದೊಳೆ' ಗೀತೆಯನ್ನು ಎಸ್. ಜಾನಕಿ ಹಾಡಿದ್ದಾರೆ. ಶಂಕರ್-ಗಣೇಶ್ ಸಂಗೀತ ನೀಡಿದ್ದಾರೆ. ಚಿ. ಉದಯಶಂಕರ್‌ ಸಾಹಿತ್ಯ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.