ADVERTISEMENT

ಪಿಎಂ ಮೋದಿ ರಾಜ್ಯಗಳ ಜೊತೆ ಕೆಲಸ ಮಾಡಿ ಆರ್ಥಿಕತೆ ಬಲಪಡಿಸಲಿ: ಅಶೋಕ್‌ ಗೆಹಲೋತ್‌

ಪಿಟಿಐ
Published 20 ಆಗಸ್ಟ್ 2022, 13:44 IST
Last Updated 20 ಆಗಸ್ಟ್ 2022, 13:44 IST
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌   

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಈ ಮೂಲಕ ಆರ್ಥಿಕತೆಯನ್ನು ಬಲಪಡಿಸಬೇಕು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಆಗ್ರಹಿಸಿದ್ದಾರೆ.

'ರಾಜ್ಯಗಳಿಗೆ ಅನುದಾನವನ್ನು ನೀಡುವುದು ಮತ್ತು ಸಹಾಯಕ್ಕೆ ನಿಲ್ಲುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ' ಎಂದು ಅಶೋಕ್‌ ಗೆಹಲೋತ್‌ ತಿಳಿಸಿದ್ದಾರೆ.

ರಾಷ್ಟ್ರ ಸಾಗುತ್ತಿರುವ ಪರಿಸ್ಥಿತಿ ಕಳವಳಕಾರಿಯಾಗಿದೆ. ಇಂತಹ ಪರಿಸ್ಥಿತಿಯನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ. ಪ್ರಧಾನಿ ಮೋದಿ ಅವರಿಗೆ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಕಾಲವಿದು. ರಾಜ್ಯಗಳ ಜೊತೆ ಕೆಲಸ ಮಾಡುತ್ತ ಆರ್ಥಿಕತೆಯನ್ನು ಬಲಪಡಿಸಬೇಕು' ಎಂದು ಗೆಹಲೋತ್‍‌ ಒತ್ತಿಹೇಳಿದ್ದಾರೆ.

ADVERTISEMENT

ರಾಜೀವ್‌ ಗಾಂಧಿ ಸೆಂಟರ್‌ ಆಫ್‌ ಅಡ್ವಾನ್ಸ್‌ ಟೆಕ್ನಾಲಜಿ (ಆರ್‌-ಸಿಎಟಿ) ಉದ್ಘಾಟಿಸಿದ ಬಳಿಕ ಗೆಹಲೋತ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.