ADVERTISEMENT

ಗುಜರಾತ್‌ | ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಶ್ರೀ ಸೋಮನಾಥ ಟ್ರಸ್ಟ್‌ ಸಭೆ ಆರಂಭ

ಪಿಟಿಐ
Published 30 ಅಕ್ಟೋಬರ್ 2023, 14:11 IST
Last Updated 30 ಅಕ್ಟೋಬರ್ 2023, 14:11 IST
<div class="paragraphs"><p>ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯ</p></div>

ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯ

   

ಅಹಮದಾಬಾದ್‌: ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುವ ಶ್ರೀ ಸೋಮನಾಥ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಗಾಂಧಿನಗರದ ರಾಜಭವನದಲ್ಲಿ ಸಭೆ ಆರಂಭಗೊಂಡಿದೆ.

‘ಶ್ರೀ ಸೋಮನಾಥ ಟ್ರಸ್ಟ್‌ನ (ಎಸ್‌ಎಸ್‌ಟಿ) ಸಭೆಯು ಗಾಂಧಿನಗರದ ರಾಜಭವನದಲ್ಲಿ ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿದೆ’ ಎಂದು ಎಸ್‌ಎಸ್‌ಟಿಯ ಟ್ರಸ್ಟಿಗಳಲ್ಲಿ ಒಬ್ಬರಾದ ಪಿ.ಕೆ ಲಹೇರಿ ತಿಳಿಸಿದ್ದಾರೆ.

ADVERTISEMENT

ಈ ದೇವಾಲಯವು ಗಿರ್‌ ಸೋಮನಾಥ ಜಿಲ್ಲೆಯ ವೆರಾವಲ್‌ ಪಟ್ಟಣದ ಸಮೀಪದಲ್ಲಿದೆ.

ಪ್ರಧಾನಿ ಮೋದಿ ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿದ್ದು, ಸಭೆಗೂ ಮುನ್ನ ಬನಸ್ಕಾಂತ್ ಜಿಲ್ಲೆಯ ಅಂಬಾಜಿ ಪಟ್ಟಣದಲ್ಲಿರುವ ಪ್ರಸಿದ್ಧ ಅಂಬಾ ದೇವಿಯ ದೇವಾಯಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.

2021ರ ಜನವರಿಯಲ್ಲಿ ಎಸ್‌ಎಸ್‌ಟಿಯ ಅಧ್ಯಕ್ಷ ಮತ್ತು ಗುಜರಾತ್‌ ಮಾಜಿ ಮುಖ್ಯಮಂತ್ರಿ ಕೇಶುಭಾಯ್‌ ಪಟೇಲ್‌ ಅವರ ನಿಧನದ ನಂತರ ಪ್ರಧಾನಿ ಮೋದಿ ಅವರನ್ನು ಎಸ್‌ಎಸ್‌ಟಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ಬಿಜೆಪಿ ಹಿರಿಯ ನಾಯಕ ಎಲ್‌. ಕೆ ಅಡ್ವಾಣಿ, ಕೇಂದ್ ಗೃಹ ಸಚಿವ ಅಮಿತ್ ಶಾ, ಗುಜರಾತ್‌ ಮೂಲಸ ವಿದ್ವಾಂಸ ಜೆ.ಡಿ ಪರ್ಮಾರ್‌ ಮತ್ತು ಉದ್ಯಮಿ ಹರ್ಷವರ್ಧನ್‌ ನಿಯೋಟಿಯಾ ಎಸ್‌ಎಸ್‌ಟಿಯ ಟ್ರಸ್ಟಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.