ADVERTISEMENT

ಮನ್‌ ಕೀ ಬಾತ್‌ನಲ್ಲಿ ಶಿವಕುಮಾರ ಸ್ವಾಮೀಜಿ ಸ್ಮರಿಸಿದ ಮೋದಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 9:50 IST
Last Updated 27 ಜನವರಿ 2019, 9:50 IST
   

ನವದೆಹಲಿ: ದಿ. ಶಿವಕುಮಾರ ಸ್ವಾಮೀಜಿ ಒಬ್ಬ ಬಹುದೊಡ್ಡ ವಿದ್ವಾಂಸ, ಸಮಾಜ ಸುಧಾರಕ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸ್ಮರಿಸಿದರು.

ವರ್ಷದ ಮೊದಲ ಹಾಗೂ 52ನೇ ಮನ್ ಕೀ ಬಾತ್‌ನಲ್ಲಿ ಶಿವಕುಮಾರ ಸ್ವಾಮೀಜಿ ಅವರ ಸಮಾಜ ಸೇವೆ, ಮತದಾನದ ಪ್ರಾಮುಖ್ಯತೆ ಮೇಲೆ ಪ್ರಧಾನಿಬೆಳಕು ಚೆಲ್ಲಿದ್ದಾರೆ.

ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಅವರ ಹಾದಿಯಲ್ಲಿ ನಡೆದ ಸ್ವಾಮೀಜಿ ತಮ್ಮ 111 ವರ್ಷ ಜೀವಮಾನದಲ್ಲಿ ಸಾವಿರಾರು ಮಕ್ಕಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸಿದರು. ಆಹಾರ, ಆಶ್ರಯ, ಶಿಕ್ಷಣ(ತ್ರಿವಿಧ ದಾಸೋಹ),ಆಧ್ಮಾತ್ಮ ಜ್ಞಾನ, ರೈತರ ಕಲ್ಯಾಣ ಅವರ ಸಮಾಜ ಸುಧಾರಣಾ ಅಂಶಗಳಲ್ಲಿ ಪ್ರಧಾನ ಆದ್ಯತೆಯಾಗಿತ್ತು.

ADVERTISEMENT

ಸ್ವಾಮೀಜಿ ಒಬ್ಬ ಸಮಾಜ ಸುಧಾರಕ. ಇಡೀ ಜೀವನವನ್ನು ಸಮಾಜದ ಸುಧಾರಣೆಗಾಗಿಯೇ ಮುಡಿಪಿಟ್ಟರು. ನನಗೆ ಸ್ವಾಮೀಜಿ ಅವರ ದರ್ಶನ ಭಾಗ್ಯ ದೊರೆತಿತ್ತು ಎಂದು ಭೇಟಿಯ ಕ್ಷಣಗಳನ್ನು ಮೆಲುಕು ಹಾಕಿದರು.

ಈ ವರ್ಷ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಮತದಾನ ಒಂದು ಪವಿತ್ರ ಕಾರ್ಯ. ಚುನಾವಣಾ ಆಯೋಗ ನಮ್ಮ ರಾಷ್ಟ್ರದ ಬಹುಮುಖ್ಯ ಸಂಸ್ಥೆ. ನಮ್ಮ ಪ್ರಜಾತಾಂತ್ರಿಕತೆಯ ಬಲವರ್ಧನೆಗೆ ಶ್ರಮಿಸುವಂತೆ ಈಗಾಗಲೇ ಚುನಾವಣಾ ಆಯೋಗಕ್ಕೆ ತಾಕೀತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.