ADVERTISEMENT

ಗಯಾದಲ್ಲಿ ಮೋದಿ ರ‍್ಯಾಲಿ:ಸಭೆಯಲ್ಲಿ ಅವ್ಯವಸ್ಥೆ, ಕುರ್ಚಿ ಕಿತ್ತು ಬಿಸಾಡಿದ ಸಭಿಕರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 13:16 IST
Last Updated 2 ಏಪ್ರಿಲ್ 2019, 13:16 IST
   

ಗಯಾ: ಬಿಹಾರದಗಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಕಾರ್ಯಕ್ರಮ ವೀಕ್ಷಿಸಲು ಬಂದ ಸಭಿಕರುರೊಚ್ಚಿಗೆದ್ದು ಕುರ್ಚಿ ಕಿತ್ತು ಬಿಸಾಡಿ ಜಗಳವಾಡಿದ ಘಟನೆ ನಡೆದಿದೆ.

ಮಂಗಳವಾರ ಬಿಹಾರದ ಗಯಾದಲ್ಲಿಚುನಾವಣಾ ಪ್ರಚಾರ ಆರಂಭಿಸಿದ ಮೋದಿಯವರ ರ‍್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರೊಚ್ಚಿಗೆದ್ದ ಸಭಿಕರು ಕುರ್ಚಿ ಕಿತ್ತು ಬಿಸಾಡಿದ್ದಾರೆ. ಕೆಲವರು ಕುರ್ಚಿ ಬಿಸಾಡುತ್ತಿದ್ದರೆ ಇನ್ನು ಕೆಲವರು ರಕ್ಷಣೆಗಾಗಿ ಕುರ್ಚಿಯನ್ನು ಅಡ್ಡ ಹಿಡಿದು ದೇಹ ರಕ್ಷಣೆ ಮಾಡಿದ್ದಾರೆ.

ಆದಾಗ್ಯೂ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದೇವೆ ಎಂದು ಪೊಲೀಸರು ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.

ADVERTISEMENT

ಜಮೂಯಿಯಲ್ಲಿ ಮೋದಿ ಭಾಷಣ
ಬಿಹಾರದ ಜಮೂಯಲ್ಲಿ ಚುನಾವಣಾ ರ‍್ಯಾಲಿ ನಡೆಸಿ ಭಾಷಣ ಮಾಡಿದ ಮೋದಿ ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿದ ಎಂಬುದನ್ನು ನೆನಪಿಸಿಕೊಳ್ಳಿ.ಅವರನ್ನು ಸೋಲಿಸುವುದಕ್ಕಾಗಿ ಕಾಂಗ್ರೆಸ್ ಹಲವಾರು ಕುತಂತ್ರ ಮಾಡಿತ್ತು. ಈಗಿನ ಯುವಜನರು ಈ ಸತ್ಯವನ್ನು ತಿಳಿದುಕೊಳ್ಳಬೇಕು.

ಮೀಸಲಾತಿ ಬಗ್ಗೆ ವದಂತಿ ಹಬ್ಬಿಸುವವರಿಗೆ ಬಿಹಾರದ ಜನರು ಸರಿಯಾದ ಉತ್ತರ ಕೊಡಬೇಕು. ಮೋದಿ ಆಗಲೀ ಬೇರೆ ಯಾರೇ ಆಗಲಿ ಮೀಸಲಾತಿಯನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎಂದಿದ್ದಾರೆ ಮೋದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.