ADVERTISEMENT

ಮೋದಿ ಯುಗಪುರುಷ, ಕ್ರೀಡಾಂಗಣಕ್ಕೆ ಅವರ ಹೆಸರಿಟ್ಟರೆ ತಪ್ಪಿಲ್ಲ: ರಾಮ್‌ದೇವ್

ಪಿಟಿಐ
Published 26 ಫೆಬ್ರುವರಿ 2021, 1:13 IST
Last Updated 26 ಫೆಬ್ರುವರಿ 2021, 1:13 IST
ಬಾಬಾ ರಾಮ್‌ದೇವ್ (ಪಿಟಿಐ ಚಿತ್ರ)
ಬಾಬಾ ರಾಮ್‌ದೇವ್ (ಪಿಟಿಐ ಚಿತ್ರ)   

ಹರಿದ್ವಾರ: ಪ್ರಧಾನಿ ನರೇಂದ್ರ ಮೋದಿ ಒಬ್ಬ ಯುಗಪುರುಷ. ಕ್ರೀಡಾಂಗಣಕ್ಕೆ ಅವರ ಹೆಸರಿಡುವುದರಲ್ಲಿ ತಪ್ಪಿಲ್ಲ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಹಿಂದಿನ ಕಟ್ಟಡಗಳು ಮತ್ತು ಸ್ಮಾರಕಗಳಿಗೆ ಆ ಕಾಲದ ಪ್ರಮುಖ ವ್ಯಕ್ತಿಗಳ ಹೆಸರಿಡಬಹುದಾಗಿದ್ದರೆ, ವರ್ತಮಾನ ಕಾಲದ ಖ್ಯಾತ ವ್ಯಕ್ತಿ ಹಾಗೂ ಯುಗಪುರುಷರಾಗಿರುವ ಮೋದಿ ಅವರ ಹೆಸರನ್ನು ಕ್ರೀಡಾಂಗಣಕ್ಕೆ ಇಡಬಾರದೇಕೆ’ ಎಂದು ಪ್ರಶ್ನಿಸಿದ್ದಾರೆ.

ಅಹಮದಾಬಾದ್‌ನ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಬುಧವಾರ ಮೋದಿ ಹೆಸರಿಡಲಾಗಿತ್ತು. ಇದಕ್ಕೆ ರಾಜಕೀಯ ವಲಯದಲ್ಲಿ ಟೀಕೆಗಳು ಕೇಳಿಬಂದಿದ್ದವು. ದೇಶಕ್ಕೇ ಮೋದಿ ಹೆಸರಿಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮ್‌ದೇವ್, ಇದು ಕೇವಲ ರಾಜಕೀಯ ಪ್ರೇರಿತ ಹೇಳಿಕೆಯಷ್ಟೆ, ಅದಕ್ಕಿಂತ ಹೆಚ್ಚಿನದ್ದೇನಿಲ್ಲ ಎಂದು ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎಂಬ ಶ್ರೇಯ ಹೊಂದಿರುವ ಅಹಮದಾಬಾದ್‌ನ ನವೀಕೃತ ಸರ್ದಾರ್ ಪಟೇಲ್‌ ಕ್ರೀಡಾಂಗಣವನ್ನು ಬುಧವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಉದ್ಘಾಟಿಸಿದ್ದರು. ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಿರುವುದಕ್ಕೆ ಟೀಕೆಗಳು ಕೇಳಿಬಂದಿದ್ದವು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.