ADVERTISEMENT

ಅಮೆರಿಕ ಅಧ್ಯಕ್ಷ ಬೈಡನ್ ಅವರಿಗಿಂತ ಪ್ರಧಾನಿ ಮೋದಿ ಜನಪ್ರಿಯ ನಾಯಕ: ಸಮೀಕ್ಷೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2023, 14:31 IST
Last Updated 4 ಫೆಬ್ರುವರಿ 2023, 14:31 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್‌ ಅವರನ್ನು ಹಿಂದಿಕ್ಕಿ, ಜಗತ್ತಿನ ಅತ್ಯಂತ ಜನಪ್ರಿಯ ನಾಯಕ ಎನಿಸಿಕೊಂಡಿದ್ದಾರೆ. ರಾಜಕೀಯ ಬೇಹುಗಾರಿಕೆ ಕಂಪನಿ 'ಮಾರ್ನಿಂಗ್‌ ಕನ್ಸಲ್ಟ್‌' ನಡೆಸಿರುವ ಸಮೀಕ್ಷೆ ಪ್ರಕಾರ, 22 ರಾಷ್ಟ್ರಗಳ ನಾಯಕರ ಪೈಕಿ ಮೋದಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

'ಅನುಮೋದಿತ ರೇಟಿಂಗ್‌ಗಳು, 2023ರ ಜನವರಿ 26–31ರ ಅವಧಿಯಲ್ಲಿ ಸಂಗ್ರಹಿಸಿದ ಅಂಕಿ–ಅಂಶಗಳನ್ನು ಆಧರಿಸಿವೆ' ಎಂದು ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಕಂಪನಿಯ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಅಂಕಿ–ಅಂಶದ ಪ್ರಕಾರ ಪ್ರಧಾನಿ ಮೋದಿ ಅವರಿಗೆ ಶೇ.78 ಜನರು ಅನುಮೋದನೆ ನೀಡಿದ್ದಾರೆ. ಮೆಕ್ಸಿಕೊ ಅಧ್ಯಕ್ಷ ಅಂಡ್ರೆಸ್‌ ಮ್ಯಾನ್ಯುಯೆಲ್‌ ಲೊಪೆಜ್ ಒಬ್ರಾಡರ್‌ (ಶೇ. 68), ಸ್ವಿಟ್ಜರ್‌ಲೆಂಡ್‌ ಅಧ್ಯಕ್ಷ ಅಲೈನ್ ಬೆರ್ಸೆಟ್‌ (ಶೇ. 62) ಅವರು ಕ್ರಮವಾಗಿ ಮೋದಿ ನಂತರದ ಸ್ಥಾನದಲ್ಲಿದ್ದಾರೆ.

ADVERTISEMENT

22 ರಾಷ್ಟ್ರಗಳ ನಾಯಕರ ಪಟ್ಟಿಯಲ್ಲಿ ಬೈಡನ್‌ (ಶೇ 40) 7ನೇ ಸ್ಥಾನದಲ್ಲಿ ಹಾಗೂ ಸುನಕ್‌ 13ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ನಾರ್ವೆ ಪ್ರಧಾನಿ ಜೋನಸ್‌ ಗಹರ್‌ ಸ್ಟೋರ್‌ (ಶೇ 23), ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್‌ ಸಿಯೋಕ್‌–ಯೌಲ್‌ (ಶೇ 21)ಮತ್ತು ಜಪಾನ್ ಪ್ರಧಾನಿ ಫುಮಿಯೊ ಕಿಶಿಡ (ಶೇ 21) ಕೊನೇ ಮೂರು ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.