ADVERTISEMENT

ಟ್ವಿಟರ್‌ ತುಂಬಿದ ಮೋದಿ ಟ್ರೆಂಡ್‌; ಹುಟ್ಟುಹಬ್ಬಕ್ಕೆ ಶುಭಾಶಯಗಳ ಪ್ರವಾಹ

69ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 3:08 IST
Last Updated 17 ಸೆಪ್ಟೆಂಬರ್ 2019, 3:08 IST
   

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಮಧ್ಯರಾತ್ರಿಯೇ ಆಚರಿಸಿ ಸಂಭ್ರಮಿಸಿದ್ದಾರೆ. ಮಂಗಳವಾರ ಬೆಳಗ್ಗಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಹರಿವು ಜೋರಾಗಿದ್ದು, ಟ್ವಿಟರ್‌ ಟ್ರೆಂಡ್‌ ತುಂಬ ನರೇಂದ್ರ ಮೋದಿಯೇ ಕಾಣುತ್ತಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಪ್ರಭಾವಿ ನಾಯಕರು, ದೇಶದ ಪ್ರಮುಖ ಮುಖಂಡರು, ಮುಖ್ಯಮಂತ್ರಿಗಳು, ಸಚಿವರು, ಗಣ್ಯರು ಹಾಗೂ ಅಭಿಮಾನಿಗಳು ಮೋದಿ ಅವರ 69ನೇ ಜನ್ಮದಿನಕ್ಕೆ ಶುಭಾಶಯ ಕೋರುತ್ತಿದ್ದಾರೆ. ಫೋಟೊ, ವಿಡಿಯೊಗಳ ಸಹಿತ#HappyBdayPMModi ,#happybirthdaynarendramodi, #HappyBirthdayPM,...ಹೀಗೆ ಹಲವು ಹ್ಯಾಷ್‌ ಟ್ಯಾಗ್‌ಗಳನ್ನು ಬಳಸಿ ಟ್ವೀಟ್‌ ಮಾಡಲಾಗುತ್ತಿದೆ.

ಟ್ವಿಟರ್‌ನ ಟಾಪ್‌ 9 ಟ್ರೆಂಡ್‌ಗಳ ಪೈಕಿ ಏಳು ಹ್ಯಾಷ್‌ಟ್ಯಾಗ್‌ಗಳಲ್ಲಿ ಮೋದಿ ಮತ್ತು ಪ್ರಧಾನಿ ಪದಗಳು ಆವರಿಸಿಕೊಂಡಿವೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ಟ್ವೀಟ್‌ಗಳ ಮೂಲಕ ಶುಭಾಶಯ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.