ADVERTISEMENT

ವಾಣಿಜ್ಯ, ಉದ್ಯಮ ಕ್ಷೇತ್ರಕ್ಕೆ ರಾಹುಲ್ ಬಜಾಜ್ ಕೊಡುಗೆ ಗಮನಾರ್ಹ: ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2022, 13:51 IST
Last Updated 12 ಫೆಬ್ರುವರಿ 2022, 13:51 IST
ರಾಹುಲ್ ಬಜಾಜ್ ಹಾಗೂ ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಸಂಗ್ರಹ ಚಿತ್ರ)
ರಾಹುಲ್ ಬಜಾಜ್ ಹಾಗೂ ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ಉದ್ಯಮಿ, ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.

‘ಜಾಗತಿಕ ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರಕ್ಕೆ ರಾಹುಲ್ ಬಜಾಜ್ ಅವರ ಕೊಡುಗೆ ಗಮನಾರ್ಹವಾದುದು. ಉದ್ಯಮಕ್ಕೆ ಹೊರತಾಗಿ, ಸಮಾಜಸೇವೆಯಲ್ಲಿಯೂ ಅವರು ಒಲವು ಹೊಂದಿದ್ದರು. ಅವರು ಉತ್ತಮ ಸಂಭಾಷಣೆಕಾರರೂ ಆಗಿದ್ದರು. ಅವರ ಅಗಲುವಿಕೆಯಿಂದ ತೀವ್ರವಾಗಿ ನೊಂದಿದ್ದೇನೆ. ಅವರ ಕುಟುಂಬದವರು ಮತ್ತು ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ. ಓ ಶಾಂತಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಾಹುಲ್ ಬಜಾಜ್ ಅವರು ಇಂದು (ಶನಿವಾರ) ಮಧ್ಯಾಹ್ನ ಪುಣೆಯಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಪುಣೆಯಲ್ಲಿ ಭಾನುವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಬಜಾಜ್ ಗ್ರೂಪ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.