ADVERTISEMENT

ಗಾಯಕ ಉಸ್ತಾದ್‌ ಖಾನ್‌ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಪಿಟಿಐ
Published 17 ಜನವರಿ 2021, 15:12 IST
Last Updated 17 ಜನವರಿ 2021, 15:12 IST
ಉಸ್ತಾದ್‌ ಗುಲಾಂ ಮುಸ್ತಫಾ ಖಾನ್‌ ಅವರೊಂದಿಗೆ ಪ್ರಧಾನಿ ಮೋದಿ (ಪ್ರಧಾನಿ ಮೋದಿ ಟ್ವಿಟರ್‌ ಚಿತ್ರ)
ಉಸ್ತಾದ್‌ ಗುಲಾಂ ಮುಸ್ತಫಾ ಖಾನ್‌ ಅವರೊಂದಿಗೆ ಪ್ರಧಾನಿ ಮೋದಿ (ಪ್ರಧಾನಿ ಮೋದಿ ಟ್ವಿಟರ್‌ ಚಿತ್ರ)    

ನವದೆಹಲಿ: ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ್‌ ಗುಲಾಂ ಮುಸ್ತಫಾ ಖಾನ್‌ (89) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಖಾನ್ ಭಾನುವಾರ ಮಧ್ಯಾಹ್ನ ಮುಂಬೈನ ಬಾಂದ್ರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ಖಾನ್‌ ನಿಧನಕ್ಕೆ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿರುವ ಮೋದಿ, ‘ಉಸ್ತಾದ್‌ ಗುಲಾಂ ಮುಸ್ತಫಾ ಖಾನ್‌ ಅಗಲಿಕೆಯಿಂದ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಅವರು ಸಂಗೀತ ಕ್ಷೇತ್ರದಲ್ಲಿ ಹಿರಿಯರಾಗಿದ್ದರು. ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿದರಾಗಿದ್ದರು. ಖಾನ್ ಬರೆದ ಕೃತಿಗಳು ಹಲವು ತಲೆಮಾರುಗಳಿಗೆ ಮಾದರಿಯಾಗಿವೆ. ಅವರೊಂದಿಗೆ ಸಂವಾದ ನಡೆಸಿದ ಬಗ್ಗೆ ನನಗೆ ಬಹಳ ನೆನಪುಗಳಿವೆ. ಖಾನ್‌ ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಸಂತಾಪ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.