ADVERTISEMENT

Pariksha Pe Charcha: ನಿಮ್ಮೊಂದಿಗೆ ಸ್ಪರ್ಧಿಸಿ ಇತರರೊಂದಿಗಲ್ಲ: ಪ್ರಧಾನಿ ಮೋದಿ

ಪಿಟಿಐ
Published 29 ಜನವರಿ 2024, 9:43 IST
Last Updated 29 ಜನವರಿ 2024, 9:43 IST
<div class="paragraphs"><p>ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ</p></div>

ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ನಿಮ್ಮೊಂದಿಗೆ ನೀವು ಸ್ಪರ್ಧಿಸಿ, ಇತರರೊಂದಿಗಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ವಾರ್ಷಿಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ADVERTISEMENT

ಇಂದು ದೆಹಲಿಯಲ್ಲಿ ನಡೆದ 7ನೇ ಆವೃತ್ತಿಯ ‘ಪರೀಕ್ಷಾ ಪೇ ಚರ್ಚೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.

‘ನೀವು ಒಂದು ಮಗುವನ್ನು ಇನ್ನೊಬ್ಬರೊಂದಿಗೆ ಹೋಲಿಸಬಾರದು ಏಕೆಂದರೆ ಅದು ಅವರ ಭವಿಷ್ಯಕ್ಕೆ ಹಾನಿಯುಂಟು ಮಾಡುತ್ತದೆ. ಕೆಲವು ಪೋಷಕರು ತಮ್ಮ ಮಕ್ಕಳ ಪರೀಕ್ಷೆಯ ಫಲಿತಾಂಶದ ಕಾರ್ಡ್‌ ಅನ್ನು ತಮ್ಮ ಪರಿಚಯ ಚೀಟಿ ಎಂದು ಪರಿಗಣಿಸುತ್ತಾರೆ, ಇದು ಒಳ್ಳೆಯದಲ್ಲ’ ಎಂದು ಅವರು ಹೇಳಿದರು.

‘ಸಹಪಾಠಿಗಳು ಪಡೆದ ಅಂಕ, ಪೋಷಕರ ಒತ್ತಡ ಮತ್ತು ಸ್ವಯಂ ಪ್ರೇರಿತವಾಗಿ ಮಾಡಿಕೊಳ್ಳುವ ಒತ್ತಡ ಇವು ಮೂರೂ ವಿಧದ ಒತ್ತಡವನ್ನು ವಿದ್ಯಾರ್ಥಿಗಳು ಅನುಭವಿಸುತ್ತಾರೆ. ಈ ರೀತಿ ಒತ್ತಡಕ್ಕೆ ಒಳಗಾದಾಗ ಅಂದುಕೊಂಡಷ್ಟು ಅಂಕಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಪರೀಕ್ಷೆ ತಯಾರಿಯನ್ನು ಆರಂಭಿಸಿದಾಗ ಸಣ್ಣ ಗುರಿಯನ್ನು ಇಟ್ಟುಕೊಳ್ಳಿ, ಗಣನೀಯವಾಗಿ ಅದನ್ನು ಎತ್ತರಿಸುತ್ತಾ ಹೋಗಿ, ಇದರಿಂದ ಪರೀಕ್ಷೆಯ ವೇಳೆಗೆ ನೀವು ಸಂಪೂರ್ಣವಾಗಿ ತಯಾರಾಗುತ್ತೀರಿ’ ಎಂದು ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿಗಳನ್ನು ಭಾರತದ ಭವಿಷ್ಯ ರೂಪಿಸುವವರು ಎಂದು ಬಣ್ಣಿಸಿದ ಮೋದಿ, ‘ಪರೀಕ್ಷಾ ಪೇ ಚರ್ಚೆ’ ಕಾರ್ಯಕ್ರಮವು ತನಗೂ ಪರೀಕ್ಷೆಯಂತಿದೆ ಎಂದು ಹೇಳಿದರು.

ಕಳೆದ ಆರು ವರ್ಷಗಳಿಂದ ಶಿಕ್ಷಣ ಸಚಿವಾಲಯ ‘ಪರೀಕ್ಷಾ ಪೇ ಚರ್ಚೆ’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.