ADVERTISEMENT

ಮಿಡತೆ ಹಾವಳಿಗೊಳಗಾಗಿರುವ ಎಲ್ಲ ರಾಜ್ಯಗಳಿಗೂ ಸಹಾಯ: ನರೇಂದ್ರ ಮೋದಿ

ಏಜೆನ್ಸೀಸ್
Published 31 ಮೇ 2020, 7:00 IST
Last Updated 31 ಮೇ 2020, 7:00 IST
   

ನವದೆಹಲಿ: ಆರ್ಥಿಕತೆ ಪ್ರಮುಖ ಭಾಗವು ತೆರೆದುಕೊಂಡಿರುವುದರಿಂದ ಜನರುಇನ್ನಷ್ಟು ಜಾಗರೂಕರಾಗಿರುವುದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ಬೆಳಗ್ಗೆ 'ಮನದ ಮಾತು' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎರಡು ಗಜ ದೂರ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ತೊಳೆಯುವುದು, ಮುಖದಲ್ಲಿ ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ಜಾಗತಿಕ ಪಿಡುಗು ವಿರುದ್ಧದ ನಮ್ಮ ಹೋರಾಟ ಮುಂದುವರಿದೆ ಎಂದು ಹೇಳಿದ್ದಾರೆ.

ಸಾಮೂಹಿಕ ಪ್ರಯತ್ನದಿಂದ ಭಾರತವು ಕರೋನಾವೈರಸ್ ವಿರುದ್ಧ ಹೋರಾಡಿದೆ. ಜಗತ್ತನ್ನು ನಾವು ನೋಡುವಾಗ ಭಾರತೀಯರ ಸಾಧನೆ ಎಷ್ಟು ದೊಡ್ಡದಾಗಿದೆ ಎಂಬುದು ನಮಗೆ ಮನವರಿಕೆಯಾಗುತ್ತದೆ. ನಾವು ಕಳೆದುಕೊಂಡಿರುವುದರ ಬಗ್ಗೆ ವಿಷಾದವಿದೆ. ಅದೇ ವೇಳೆ ನಾವು ಕಾಪಾಡಿದ್ದು ನಮ್ಮೆಲ್ಲರ ಇಚ್ಛಾಶಕ್ತಿಯಿಂದಾಗಿದೆ .

ADVERTISEMENT

ಮಿಡತೆಗಳ ದಾಳಿ ನಿಯಂತ್ರಿಸುವುದಕ್ಕೆ ಕೃಷಿ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿ ಹೋರಾಡುತ್ತಿವೆ. ಅಂಪನ್ ಚಂಡಮಾರುತ ಮತ್ತು ಮಿಡತೆ ದಾಳಿಯಿಂದ ಪ್ರಕೃತಿಯೇ ಶಕ್ತಿಶಾಲಿ ಎಂಬುದನ್ನು ತೋರಿಸಿಕೊಟ್ಟಿದೆ ಎಂದಿದ್ದಾರೆ ಮೋದಿ.

ಮನ್ ಕೀ ಬಾತ್‌ನಲ್ಲಿ ಮೋದಿ ಮಾತು
ಚಂಡಮಾರುತ ಅಂಪನ್‌ನ್ನು ಎದುರಿಸಲು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕಠಿಣ ಹೋರಾಟ ನಡೆಸಿವೆ.
ಆಯುಷ್ಮಾನ್ ಭಾರತ್ ಮೂಲಕ ಕಡಿಮೆ ಬೆಲೆಯಲ್ಲಿ ಅಥವಾ ಉಚಿತವಾಗಿ ಸಿಗುವ ಔಷಧಿ ಬಳಸಿ ಹಲವಾರು ಮಂದಿ ರೋಗಗಳಿಂದ ಗುಣಮುಖರಾಗಿದ್ದಾರೆ.ಇದರ ಫಲಾನುಭವಿಗಳಲ್ಲಿ ಶೇ.80ರಷ್ಟು ಮಂದಿ ಗ್ರಾಮೀಣ ಪ್ರದೇಶದವರಾಗಿದ್ದಾರೆ. ಮಣಿಪುರದ ದಿನಗೂಲಿ ಕಾರ್ಮಿಕರೊಬ್ಬರ ಮಗ ಕೆಲೆನ್ ತ್ಸಾಂಗ್ ಆಯುಷ್ಮಾನ್ ಭಾರತ್ ಮೂಲಕ ಚಿಕಿತ್ಸೆ ಪಡೆದು ಮೆದುಳು ರೋಗದಿಂದ ಗುಣಮುಖರಾಗಿದ್ದಾರೆ.

ಜಗತ್ತಿನಾದ್ಯಂತ ಕೊರೊನಾವೈರಸ್ ಹರಡಿರುವಾಗ ಯೋಗ ಮತ್ತು ಆಯುರ್ವೇದವು ಮತ್ತಷ್ಟು ಪ್ರಸ್ತುತವಾಗಿದೆ. ಜಗತ್ತಿನ ಹಲವಾರು ನಾಯಕರು ಯೋಗ ಮತ್ತು ಆಯುರ್ವೇದದ ಪ್ರಯೋಜನಗಳನ್ನು ನನ್ನಲ್ಲಿ ಕೇಳಿದ್ದಾರೆ.

ಸ್ವಾವಲಂಬಿಯಾಗುವುದ ಮನುಷ್ಯನನ್ನು ಬೆಳಕಿನತ್ತ ಕೊಂಡೊಯ್ಯತ್ತದೆ. ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಆಶಿಸಿ ಬಿಹಾರದ ನಾಗರಿಕರೊಬ್ಬರು ಪತ್ರ ಬರೆದಿರುವುದು ಶ್ಲಾಘನೀಯ.

ಕೊರೊನಾವೈರಸ್‌ಗಿರುವ ಔಷಧಿಕಂಡು ಹಿಡಿಯಲು ಭಾರತ ನಡೆಸುತ್ತಿರುವ ಪರಿಶ್ರಮನ್ನು ಜಗತ್ತು ಹತ್ತಿರದಿಂದ ಗಮನಿಸುತ್ತಿದೆ.

ಕೋವಿಡ್ -19 ವಿರುದ್ಧ ಹೋರಾಡಿದ ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸಿದ ಮೋದಿ ನಾವು ಹಲವಾರು ಜನರ ಪ್ರಾಣ ಉಳಿಸಿದ್ದೇವೆ ಎಂದಿದ್ದಾರೆ.ಜನರು ಮತ್ತೊಬ್ಬರಿಗೆ ಸಹಾಯ ಮಾಡುವ ಮೂಲಕ ಖಿನ್ನತೆಗೊಳಗಾಗದಂತೆ ನೋಡಿಕೊಳ್ಳಬೇಕು. ಜನರಿಗೆ ಆಹಾರ ನೀಡಿ ಸಹಾಯ ಮಾಡಿದ ಅಗರ್ತಲದ ಗೌತಮ್ ದಾಸ್ ಕಾರ್ಯಕ್ಕೆ ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.