ನವದೆಹಲಿ:ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅನುಯಾಯಿಗಳ ಸಂಖ್ಯೆ ಆರು ಕೋಟಿಗೆ ಏರಿಕೆಯಾಗಿದೆ.
2009ರ ಜನವರಿಯಲ್ಲಿ ಅವರು ಟ್ವಿಟರ್‌ಖಾತೆ ತೆರೆದಿದ್ದು, 2,354 ಜನರನ್ನು ಅವರು ಹಿಂಬಾಲಿಸುತ್ತಿದ್ದರು.2019ರಲ್ಲಿ ಮೋದಿ ಅವರಿಗೆ ಟ್ವಿಟ್ಟರ್‌ನಲ್ಲಿ ಐದು ಕೋಟಿ ಹಿಂಬಾಲಕರಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಮೋದಿ ಅವರು 4.5 ಕೋಟಿ ಅನುಯಾಯಿಗಳನ್ನು ಹೊಂದಿದ್ಧಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರನ್ನು ತಲುಪಲು ಹೆಸರುವಾಸಿಯಾಗಿರುವ ಮೋದಿ,ಪ್ರಮುಖ ಮಾಹಿತಿಗಳನ್ನು ಜನರೊಂದಿಗೆ ಹಂಚಿಕೊಳ್ಳಲುಟ್ವಿಟರ್‌ಅನ್ನು ವ್ಯಾಪಕವಾಗಿ ಬಳಸುತ್ತಾರೆ.
ಸಂಸದ ರಾಹುಲ್ ಗಾಂಧಿ ಅವರು 2015ರಲ್ಲಿ ಟ್ವಿಟರ್‌ಖಾತೆ ತೆರೆದಿದ್ದು, 1.5 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಟ್ವಿಟರ್‌ನಲ್ಲಿ 8.3 ಕೋಟಿ ಅನುಯಾಯಿಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.