ADVERTISEMENT

ಕೋವಿಡ್ ಲಸಿಕೆ ಉತ್ಪಾದಕರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ಇಂದು

ಪಿಟಿಐ
Published 23 ಅಕ್ಟೋಬರ್ 2021, 5:52 IST
Last Updated 23 ಅಕ್ಟೋಬರ್ 2021, 5:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ ಲಸಿಕೆ ಉತ್ಪಾದಿಸುವ ಭಾರತದ ಏಳು ಸಂಸ್ಥೆಗಳ ಪ್ರಮುಖರನ್ನುಶನಿವಾರ ಭೇಟಿ ಮಾಡುವರು. ಭಾರತವು 100 ಕೋಟಿ ಡೋಸ್‌ ಲಸಿಕೆಯನ್ನು ನೀಡಿದ ಮೈಲುಗಲ್ಲು ದಾಟಿದ ಹಿನ್ನೆಲೆಯಲ್ಲಿ ಈ ಭೇಟಿ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೀರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾ, ಭಾರತ್ ಬಯೊಟೆಕ್‌, ಡಾ.ರೆಡ್ಡೀಸ್ ಲ್ಯಾಬೊರೇಟರಿ, ಝೈಡುಸ್‌ ಕ್ಯಾಡಿಲಾ, ಬಯೊಲಾಜಿಕಲ್‌ ಇ., ಜೆನ್ನೊವಾ ಬಯೊಫಾರ್ಮಾ, ಪನೆಷಿಯ ಬಯೊಟೆಕ್‌ ಸಂಸ್ಥೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸುವರು ಎಂದು ತಿಳಿಸಿವೆ.

ಭಾರತದಲ್ಲಿ ಎಲ್ಲ ಅರ್ಹರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಲಸಿಕೆಯನ್ನು ನೀಡಲು ಒತ್ತು ನೀಡುವುದು, ಭಾರತದ ‘ಸರ್ವರಿಗೂ ಲಸಿಕೆ’ ಧ್ಯೇಯಕ್ಕೆ ಅನುಗುಣವಾಗಿ ಇತರೆ ದೇಶಗಳಿಗೂ ಲಸಿಕೆ ರಫ್ತು ಪ್ರಕ್ರಿಯೆಯನ್ನು ಚುರುಕುಗೊಳಿಸುವ ಕುರಿತು ಪ್ರಧಾನಿ ಸಭೆಯಲ್ಲಿ ಒತ್ತು ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ವಿವರಿಸಿವೆ.

ADVERTISEMENT

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಶನಿವಾರ ಬೆಳಿಗ್ಗೆ 7ರಂದು ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ದೇಶದಾದ್ಯಂತ 101.30 ಕೋಟಿ ಡೋಸ್‌ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ. ಭಾರತವು 100 ಕೋಟಿ ಡೋಸ್ ಲಸಿಕೆಯನ್ನು ನೀಡಿದ್ದ ಗುರಿಯನ್ನು ಅಕ್ಟೋಬರ್ 21ರಂದು ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.