ADVERTISEMENT

ಹಿಮಾಚಲ ಪ್ರದೇಶಕ್ಕೆ ಇಂದು ಮೋದಿ ಭೇಟಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2022, 2:43 IST
Last Updated 13 ಅಕ್ಟೋಬರ್ 2022, 2:43 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಗುರುವಾರ) ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

ಉನಾದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ, ಇದಾದ ಬಳಿಕ ಬಲ್ಕ್ ಡ್ರಗ್ ಪಾರ್ಕ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.

ಹೊಸದಾಗಿ ಸಂಚಾರ ಆರಂಭಿಸಿರುವ ‘ವಂದೇ ಭಾರತ್ ಏಕ್ಸ್‌ಪ್ರೆಸ್’ ರೈಲು ಅವಘಡಗಳ ಕಾರಣಕ್ಕಾಗಿ ಕಳೆದೊಂದು ವಾರದಿಂದ ಸುದ್ದಿಯಲ್ಲಿದ್ದು, ಶನಿವಾರ (ಅ.8) ನವದೆಹಲಿ– ವಾರಾಣಸಿ ಮಾರ್ಗದ ರೈಲಿನ ಚಕ್ರಗಳು ಜಾಮ್ ಆಗಿದ್ದರಿಂದ ಪ್ರಯಾಣಿಕರಿಗೆ ಪರ್ಯಾಯವಾಗಿ ವಿಶೇಷ ರೈಲು ವ್ಯವಸ್ಥೆ ಮಾಡಲಾಯಿತ್ತು.

ADVERTISEMENT

‘ದೆಹಲಿಯ ರೈಲ್ವೆ ನಿಲ್ದಾಣದಿಂದ ಹೊರಟ ಸೆಮಿ ಹೈಸ್ಪೀಡ್ ರೈಲು, 90 ಕಿ.ಮೀ. ಕ್ರಮಿಸಿದ ಬಳಿಕ ಉತ್ತರಪ್ರದೇಶದ ಖುಜ್ರಾ ನಿಲ್ದಾಣದ ಬಳಿ ಚಕ್ರಗಳು ಜಾಮ್ ಆಗಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು.

ಕಳೆದ ಗುರುವಾರ (ಅ.6) ಗಾಂಧಿನಗರ–ಮುಂಬೈ ಮಾರ್ಗದಲ್ಲಿ ‘ವಂದೇ ಭಾರತ್ ಏಕ್ಸ್‌ಪ್ರೆಸ್’ ರೈಲಿಗೆ ಎಮ್ಮೆಗಳು ಅಡ್ಡಬಂದಿದ್ದವು. ಶುಕ್ರವಾರ ಗುಜರಾತ್‌ನ ಆಣಂದ್ ಸಮೀಪ ಈ ರೈಲು ಹಸುವಿಗೆ ಡಿಕ್ಕಿ ಹೊಡೆದಿತ್ತು. ಈ ಎರಡೂ ಅವಘಡಗಳಲ್ಲಿ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.