ಪಿಣರಾಯಿ ವಿಜಯನ್–ಪಿಟಿಐ ಚಿತ್ರ
ತಿರುವನಂತಪುರ: ‘ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಆರ್‌ಎಸ್‌ಎಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೈಭವೀಕರಿಸಿರುವುದು ಆ ದಿನವನ್ನೇ ಅವಮಾನಿಸಿದಂತಾಗಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ.
‘ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾದ ಬಲಪಂಥೀಯ ಸಂಘಟನೆ ಆರ್‌ಎಸ್‌ಎಸ್ ಅನ್ನು ಪ್ರಧಾನಿ ಮೋದಿ ಅವರು ಹೊಗಳಿರುವುದು ಸ್ವಾತಂತ್ರ್ಯ ಪಿತೃತ್ವವನ್ನು ಆ ಸಂಘಟನೆಗೆ ನೀಡಿದಂತಾಗಿದೆ’ ಎಂದು ವಿಜಯನ್ ಅವರು ಕಚೇರಿ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಮೋದಿ ಅವರ ನಡೆಯು ‘ಇತಿಹಾಸವನ್ನು ತಿರಸ್ಕರಿಸುವ’ ಹೆಜ್ಜೆಯಾಗಿದೆ. ಆರ್‌ಎಸ್‌ಎಸ್ ಹೊಂದಿರುವ ವಿಭಜಕ ರಾಜಕೀಯದ ವಿಷಪೂರಿತ ಇತಿಹಾಸವನ್ನು ಇಂತಹ ನಡೆಗಳಿಂದ ಮರೆಮಾಚಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.