ADVERTISEMENT

ತ್ರಿವಳಿ ತಲಾಕ್ ಉಳಿವಿಗೆ ಓಲೈಕೆ ರಾಜಕಾರಣವೇ ಕಾರಣ

ಪಿಟಿಐ
Published 18 ಆಗಸ್ಟ್ 2019, 20:17 IST
Last Updated 18 ಆಗಸ್ಟ್ 2019, 20:17 IST
 ಅಮಿತ್ ಶಾ
ಅಮಿತ್ ಶಾ   

ನವದೆಹಲಿ:‘ಓಲೈಕೆ ರಾಜಕಾರಣದಿಂದಲೇ ದೇಶ ವಿಭಜನೆಯಾಯಿತು. ಓಲೈಕೆ ರಾಜಕಾರಣದಿಂದಲೇ ತ್ರಿವಳಿ ತಲಾಕ್‌ನಂತಹ ಕೆಟ್ಟ ಪದ್ಧತಿ ಈವರೆಗೆ ಚಾಲ್ತಿಯಲ್ಲಿತ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ತ್ರಿವಳಿ ತಲಾಕ್ ನೀಡುವುದನ್ನು ಅಪರಾಧೀಕರಣಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾ ಸಮರ್ಥಿಸಿಕೊಂಡರು.

‘ತ್ರಿವಳಿ ತಲಾಕ್‌ ಅನ್ನು ಅಪರಾಧೀಕರಣಗೊಳಿಸಿದ್ದಕ್ಕೆ ಬಿಜೆಪಿಯನ್ನು ಹಲವರು ಟೀಕಿಸುತ್ತಿದ್ದಾರೆ. ಆದರೆ ಇದರಿಂದ ಮುಸ್ಲಿಂ ಮಹಿಳೆಯರಿಗೆ ಅನುಕೂಲವಾಗುತ್ತದೆಯೇ ಹೊರತು, ಹಿಂದೂ, ಜೈನ ಮತ್ತು ಕ್ರೈಸ್ತ ಮಹಿಳೆಯರಿಗೆ ಅಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಶಾ ಬಾನೋ ಪ್ರಕರಣದ ಸಂದರ್ಭದಲ್ಲೇ ತ್ರಿವಳಿ ತಲಾಕ್ ನಿಷೇಧವಾಗಬೇಕಿತ್ತು. ಆದರೆ ಓಲೈಕೆ ರಾಜಕಾರಣದ ಕಾರಣ ಅದು ಈವರೆಗೆ ಉಳಿದುಕೊಂಡು ಬಂತು. ನಾವು ತಂದ ಬದಲಾವಣೆಯನ್ನು ಶೇ 92.1ರಷ್ಟು ಮುಸ್ಲಿ ಮಹಿಳೆಯರು ಸ್ವಾಗತಿಸಿದ್ದಾರೆ. ಆದರೆ ಅಂದೂ ಇದಕ್ಕೆ ತಡೆ ಒಡ್ಡಿದ್ದ ಕಾಂಗ್ರೆಸ್‌, ಇಂದೂ ವಿರೋಧಿಸುತ್ತಿದೆ. ಕಾಂಗ್ರೆಸ್‌ಗೆ ನಾಚಿಕೆಯೇ ಇಲ್ಲ’ ಎಂದು ಅವರು ಟೀಕಿಸಿದ್ದಾರೆ.

*
ಅಧಿಕಾರಕ್ಕಾಗಿ ಹಸಿದಿರುವ ಜನರಿಗೆ ಅಭಿವೃದ್ಧಿ ಬೇಕಿಲ್ಲ, ಮುಸ್ಲಿಂ ಮಹಿಳೆಯರ ಬಗ್ಗೆ ಕಾಳಜಿ ಇಲ್ಲ. ಅವರು ಮತಬ್ಯಾಂಕ್‌ಗಾಗಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ.
-ಅಮಿತ್ ಶಾ, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.