ADVERTISEMENT

ಕಟ್ಟುಕಥೆಗಳ ಮೂಲಕ ಚುನಾವಣೆ ಪ್ರಕ್ರಿಯೆ ಬುಡಮೇಲು ಮಾಡುವುದು ತಡೆಯಬೇಕು: ಚುನಾವಣಾ ಆಯೋಗ

ಪಿಟಿಐ
Published 12 ಜುಲೈ 2023, 13:55 IST
Last Updated 12 ಜುಲೈ 2023, 13:55 IST
ರಾಜೀವ್‌ ಕುಮಾರ್
ರಾಜೀವ್‌ ಕುಮಾರ್   

ನವದೆಹಲಿ: ಕಟ್ಟುಕಥೆಗಳ ಮೂಲಕ ಚುನಾವಣೆ ಪ್ರಕ್ರಿಯೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ವಿಶ್ವದೆಲ್ಲೆಡೆ ನಡೆಯುತ್ತಿವೆ. ಆಯಾ ದೇಶಗಳ ಚುನಾವಣಾ ಆಯೋಗಗಳು ಇಂತಹ ಪ್ರಯತ್ನಗಳನ್ನು ತಡೆಯುವ ಕಾರ್ಯ ಮಾಡಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್‌ ಕುಮಾರ್‌ ಬುಧವಾರ ಹೇಳಿದರು.

ಕೊಲಂಬಿಯಾದಲ್ಲಿ ನಡೆಯುತ್ತಿರುವ ‘ಅಸೋಸಿಯೇಷನ್ ಆಫ್‌ ವರ್ಲ್ಡ್ ಎಲೆಕ್ಷನ್‌ ಬಾಡೀಸ್’ (ಎ–ವೆಬ್)ನ ಕಾರ್ಯನಿರ್ವಾಹಕ ಮಂಡಳಿಯ 11ನೇ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಚುನಾವಣಾ ಪ್ರಕ್ರಿಯೆಗಳನ್ನು ಹಾಳು ಮಾಡುವ ಪ್ರಯತ್ನಗಳನ್ನು ಮಟ್ಟ ಹಾಕಲು ಚುನಾವಣಾ ಆಯೋಗಗಳು ‘ಎ–ವೆಬ್’ನಂತಹ ವೇದಿಕೆಗಳಡಿ ಒಗ್ಗೂಡಿ ಕಾರ್ಯನಿರ್ವಹಿಸಬೇಕು’ ಎಂದು ರಾಜೀವ್‌ಕುಮಾರ್ ಪ್ರತಿಪಾದಿಸಿದರು.

ADVERTISEMENT

‘ಚುನಾವಣೆಗಳನ್ನು ನಿರ್ವಹಿಸುವ ಸಂಸ್ಥೆಗಳ ಕಾರ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವ ಸಂಬಂಧ ಎ–ವೆಬ್ ಜಾಗತಿಕ ಪ್ರಶಸ್ತಿಗಳನ್ನು ಸ್ಥಾಪಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.