ADVERTISEMENT

ಕೇರಳದಲ್ಲಿ ಪ್ರವಾಹಕ್ಕೆ ಕಾರಣ ಅಣೆಕಟ್ಟಿನ ಕಳಪೆ ನಿರ್ವಹಣೆ: ಅಮಿಕಸ್ ಕ್ಯೂರಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 14:13 IST
Last Updated 3 ಏಪ್ರಿಲ್ 2019, 14:13 IST
   

ತಿರುವನಂತಪುರಂ: ಅಣೆಕಟ್ಟಿನ ಕಳಪೆ ನಿರ್ವಹಣೆಯಿಂದಾಗಿ ಕೇರಳದಲ್ಲಿ ಪ್ರವಾಹವುಂಟಾಗಿದ್ದು ಎಂದು ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಹೇಳಿದ್ದಾರೆ.

ಪ್ರಳಯಕ್ಕೆ ಕಾರಣ ಏನೆಂದು ಪತ್ತೆ ಹಚ್ಚಲು ನ್ಯಾಯಾಂಗ ತನಿಖೆ ನಡೆಸಬೇಕು. ಅಣೆಕಟ್ಟುಗಳನ್ನು ತೆರೆದು ಬಿಡುವಾಗ ಮಾನದಂಡಗಳನ್ನು ಪಾಲಿಸಿಲ್ಲ ಎಂದು ಅಮಿಕಸ್ ಕ್ಯೂರಿ ಜೇಕಬ್ ಪಿ ಅಲೆಕ್ಸ್ ಹೈಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ.

49 ಪುಟಗಳ ವಿಸ್ತೃತ ವರದಿ ಹೈಕೋರ್ಟ್‍ಗೆ ಸಲ್ಲಿಸಲಾಗಿದೆ.ಮಾನದಂಡಗಳನ್ನು ಪಾಲಿಸದೆ, ಯಾವುದೇ ಮುನ್ಸೂಚನೆಗಳನ್ನು ನೀಡದೆಯೇ ಅಣೆಕಟ್ಟಿನ ನೀರನ್ನು ಹೊರ ಹರಿಯಲು ಬಿಟ್ಟಿದ್ದು ಪ್ರಳಯ ಸಂಭವಿಸಲು ಕಾರಣವೇ? ಎಂಬುದರ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಈ ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಅಣೆಕಟ್ಟಿನಲ್ಲಿ ಕೆಸರು ಸಂಗ್ರಹವಾಗಿದ್ದರಿಂದ ನೀರು ಬೇಗನೆ ತುಂಬಿದೆ.ಅದೇ ವೇಳೆ ರಾಷ್ಟ್ರೀಯ ಹವಾಮಾನ ನಿರೀಕ್ಷಣಾ ಕೇಂದ್ರದ ವರದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ.ಜೋರಾಗಿ ಸುರಿವ ಮಳೆಯ ಪರಿಣಾಮವನ್ನು ಎದುರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಳಯವನ್ನು ನಿಭಾಯಿಸುವ ಕಾರ್ಯದಲ್ಲಿ ಸರ್ಕಾರ ಸೋತಿದೆ ಎಂಬ ಆರೋಪ ಹೊರಿಸಿ ಸಾಕಷ್ಟು ಅರ್ಜಿಗಳುಹೈಕೋರ್ಟ್‍ನಲ್ಲಿವೆ. ಹೀಗಾಗಿ ನ್ಯಾಯಾಲಯವು ಅಮಿಕಸ್ ಕ್ಯೂರಿ ನೇಮಕ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.