ADVERTISEMENT

ಭಾರತದ ನಾಗರಿಕರ ಪರವಾಗಿ ನೂತನ ಪೋಪ್‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಪಿಟಿಐ
Published 9 ಮೇ 2025, 9:54 IST
Last Updated 9 ಮೇ 2025, 9:54 IST
<div class="paragraphs"><p>ಪೋಪ್ ಲಿಯೊ 14 ಮತ್ತು ನರೇಂದ್ರ ಮೋದಿ</p></div>

ಪೋಪ್ ಲಿಯೊ 14 ಮತ್ತು ನರೇಂದ್ರ ಮೋದಿ

   

ನವದೆಹಲಿ: ರೋಮನ್ ಕ್ಯಾಥೊಲಿಕ್ ಚರ್ಚ್‌ನ ನೂತನ ಪೋಪ್‌ ಆಗಿ ಆಯ್ಕೆಯಾದ ‘ಲಿಯೊ 14’ ಅವರಿಗೆ ಭಾರತದ ನಾಗರಿಕರ ಪರವಾಗಿ ಅಭಿನಂದನೆ ಮತ್ತು ಶುಭಾಶಯಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಲ್ಲಿಸಿದ್ದಾರೆ.

‘ವ್ಯಾಟಿಕನ್ ನಗರದ ಆಡಳಿತದೊಂದಿಗೆ ನಿರಂತರ ಸಂಪರ್ಕಕ್ಕೆ ಭಾರತ ಬದ್ಧ. ಜಗತ್ತಿಗೆ ಸದ್ಯ ಅಗತ್ಯ ಇರುವ ಶಾಂತಿ, ಸಾಮರಸ್ಯ, ಏಕತೆ ಮತ್ತು ಸೇವಾ ಮನೋಭಾವವನ್ನು ತಿಳಿಸುವ ಸರಿಯಾದ ಸಮಯದಲ್ಲಿ ಪೋಪ್ ಲಿಯೊ 14 ಅವರು ನಾಯಕತ್ವ ವಹಿಸಿಕೊಂಡಿದ್ದಾರೆ’ ಎಂದಿದ್ದಾರೆ.

ADVERTISEMENT

ಕ್ಯಾಥೊಲಿಕ್ ಚರ್ಚ್‌ನ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಬಿಷಪ್‌ ಒಬ್ಬರು ಪೋಪ್‌ ಹುದ್ದೆಗೇರಿದ್ದಾರೆ. ಪೋಪ್ ಆಗಿ ಆಯ್ಕೆಯಾದ 69 ವರ್ಷದ ರಾಬರ್ಟ್‌ ಫ್ರಾನ್ಸಿಸ್ ಪ್ರಿವೊಸ್ಟ್‌ ಅವರನ್ನು ಮುಂದೆ ‘ಲಿಯೊ 14’ ಹೆಸರಿನಿಂದ ಕರೆಯಲಾಗುವುದು ಎಂದು ವ್ಯಾಟಿಕ್ ನಗರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.