ADVERTISEMENT

ಜಮ್ಮು: ದೇವಾಲಯದ ಮೇಲೆ ದಾಳಿ ನಡೆಸಲು ಸಂಚು; ಶಂಕಿತರ ಬಂಧನ

ಪಿಟಿಐ
Published 27 ಡಿಸೆಂಬರ್ 2020, 9:25 IST
Last Updated 27 ಡಿಸೆಂಬರ್ 2020, 9:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ನಾಲ್ಕು ಮಂದಿ ಶಂಕಿತ ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಅವರಿಂದ ಆರು ಗ್ರನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು.

ಶಂಕಿತರು ದೇವಾಲಯದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಅವರು ಹೇಳಿದರು.

ಸ್ಥಳೀಯ ಪೊಲೀಸರ ವಿಶೇಷ ಪಡೆ ಮತ್ತು 49 ರಾಷ್ಟ್ರೀಯ ರೈಫಲ್ಸ್‌ನ ಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದವು. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಬಸೂನಿಯ ಮೆಂಧರ್ ಸೆಕ್ಟರ್‌ನ ಬಳಿ ವಾಹನ ತಪಾಸಣೆ ವೇಳೆ ಸಹೋದರರಿಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನುಗಲ್ಹುಟಾ ಗ್ರಾಮದ ಮುಸ್ತಫಾ ಇಕ್ಬಾಲ್ ಮತ್ತು ಮುರ್ತಾಜಾ ಇಕ್ಬಾಲ್ ಎಂದು ಗುರುತಿಸಲಾಗಿದೆ ಎಂದು ಪೂಂಚ್ ಸೆಕ್ಟರ್‌ನ ಪೊಲೀಸ್‌ವರಿಷ್ಠಾಧಿಕಾರಿ ರಮೇಶ್ ಕುಮಾರ್ ಆಂಗ್ರಾಲ್ ಅವರು ತಿಳಿಸಿದರು.

ADVERTISEMENT

ಮುರ್ತಾಜಾ ಇಕ್ಬಾಲ್ ಮೊಬೈಲ್‌ಗೆ ಪಾಕಿಸ್ತಾನದ ನಂಬರ್‌ನಿಂದ ಕರೆಬಂದಿರುವ ಬಗ್ಗೆ ತನಿಖೆ ವೇಳೆ ಗೊತ್ತಾಗಿದೆ. ಅಲ್ಲದೆ ಆತನ ಫೋನಿನಲ್ಲಿ ಗ್ರೆನೇಡ್‌ ಬಳಕೆ ಬಗೆಗಿನ ವಿಡಿಯೊ ಕೂಡ ಸಿಕ್ಕಿದೆ. ಮುರ್ತಾಜಾ ಇಕ್ಬಾಲ್ ಮನೆಯಿಂದ ಆರು ಗ್ರೆನೇಡ್‌ಗಳು ಹಾಗೂ ಜಮ್ಮು–ಕಾಶ್ಮೀರದ ಗಾಸ್ನಾವಿ ಸಂಘಟನೆಯ ಪೋಸ್ಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ದಾಬಿ ಗ್ರಾಮದಿಂದಲೂ ಇಬ್ಬರು ಶಂಕಿತ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಆಂಗ್ರಾಲ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.