ADVERTISEMENT

ಖಾಸಗೀಕರಣ ವಿರೋಧಿಸಿ ವಿದ್ಯುತ್ ಕ್ಷೇತ್ರದ ನೌಕರರಿಂದ ನಾಳೆ ದೇಶವ್ಯಾಪಿ ಪ್ರತಿಭಟನೆ

ಪಿಟಿಐ
Published 31 ಜನವರಿ 2022, 7:01 IST
Last Updated 31 ಜನವರಿ 2022, 7:01 IST
ಸಾಂದರ್ಭಿಕ ಚಿತ್ರ – ಎಎಫ್‌ಪಿ
ಸಾಂದರ್ಭಿಕ ಚಿತ್ರ – ಎಎಫ್‌ಪಿ   

ನವದೆಹಲಿ: ಖಾಸಗೀಕರಣ ನೀತಿಗಳನ್ನು ವಿರೋಧಿಸಿ ಫೆಬ್ರುವರಿ 1ರಂದು ವಿದ್ಯುತ್ ಕ್ಷೇತ್ರದ ನೌಕರರು ದೇಶವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅಖಿಲ ಭಾರತ ವಿದ್ಯುತ್ ಎಂಜಿನಿಯರ್‌ಗಳ ಒಕ್ಕೂಟ (ಎಐಪಿಇಎಫ್) ತಿಳಿಸಿದೆ.

ವಿದ್ಯುತ್ ಕ್ಷೇತ್ರದ ನೌಕರರ, ಎಂಜಿನಿಯರ್‌ಗಳ ರಾಷ್ಟ್ರೀಯ ಸಮನ್ವಯ ಸಮಿತಿ (ಎನ್‌ಸಿಸಿಒಇಇಇ) ಕರೆ ನೀಡಿರುವಂತೆ, ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಗಳ ವಿರುದ್ಧ ನೌಕರರು ಹಾಗೂ ಎಂಜಿನಿಯರ್‌ಗಳು ದೇಶವ್ಯಾಪಿ ಪ್ರತಿಭಟನೆಗಳನ್ನು ನಡೆಸಲಿದ್ದಾರೆ ಎಂದು ಎಐಪಿಇಎಫ್ ಪ್ರಕಟಣೆ ತಿಳಿಸಿದೆ.

ಎನ್‌ಸಿಸಿಒಇಇಇ ಕರೆಯಂತೆ ಸುಮಾರು 15 ಲಕ್ಷ ಉದ್ಯೋಗಿಗಳು, ಎಂಜಿನಿಯರ್‌ಗಳು ದೇಶದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.