ADVERTISEMENT

ದೀರ್ಘ ಕೋಮಾ ಸ್ಥಿತಿಯಲ್ಲಿ ಪ್ರಣವ್ ಮುಖರ್ಜಿ

ಪಿಟಿಐ
Published 28 ಆಗಸ್ಟ್ 2020, 8:39 IST
Last Updated 28 ಆಗಸ್ಟ್ 2020, 8:39 IST
ಪ್ರಣವ್‌ ಮುಖರ್ಜಿ
ಪ್ರಣವ್‌ ಮುಖರ್ಜಿ   

ನವದೆಹಲಿ: ‘ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ದೀರ್ಘ ಕೋಮಾ ಸ್ಥಿತಿಯಲ್ಲೇ ಇದ್ದು ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ’ ಎಂದು ಇಲ್ಲಿನ ಸೇನಾ ಆಸ್ಪತ್ರೆಯು ಶುಕ್ರವಾರ ತಿಳಿಸಿದೆ.

‘ಪ್ರಣವ್‌ ಅವರ ರಕ್ತದೊತ್ತಡ, ಹೃದಯ ಮತ್ತು ನಾಡಿ ಮಿಡಿತವು ಸ್ಥಿರವಾಗಿದೆ. ತೀವ್ರ ನಿಗಾ ಘಟಕದಲ್ಲಿ (ಐಸಿಯು) ವೆಂಟಿಲೇಟರ್‌ ನೆರವಿನಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

84 ವರ್ಷ ವಯಸ್ಸಿನ ಪ್ರಣವ್‌, ಶ್ವಾಸಕೋಶದ ಸೋಂಕು ಮತ್ತು ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಕೊರೊನಾ ಸೋಂಕು ಇರುವುದೂ ದೃಢಪಟ್ಟಿತ್ತು.

ADVERTISEMENT

ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಪ್ರಣವ್‌ ಅವರು ಆಗಸ್ಟ್‌ 10ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರುಶಸ್ತ್ರಚಿಕಿತ್ಸೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.