ADVERTISEMENT

51 ಶೈಕ್ಷಣಿಕ ಟಿವಿ ಚಾನೆಲ್‌ ಆರಂಭಕ್ಕೆ ಒಪ್ಪಂದ

ಪಿಟಿಐ
Published 4 ನವೆಂಬರ್ 2020, 14:18 IST
Last Updated 4 ನವೆಂಬರ್ 2020, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 51 ಡೈರೆಕ್ಟ್‌ ಟು ಹೋಂ (ಡಿಟಿಎಚ್‌) ಶೈಕ್ಷಣಿಕ ಟಿವಿ ಚಾನೆಲ್‌ಗಳನ್ನು ಆರಂಭಿಸುವ ಕುರಿತಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್‌ ಸಚಿವಾಲಯದ ಜೊತೆ ಪ್ರಸಾರ ಭಾರತಿಯು ಬುಧವಾರ ಒಪ್ಪಂದ ಮಾಡಿಕೊಂಡಿದೆ.

ದೇಶದ ಗ್ರಾಮೀಣ ಭಾಗದಲ್ಲಿರುವ ಮಕ್ಕಳಿಗೂ ಅನುಕೂಲವಾಗುವಂತೆ ನೇರವಾಗಿ ಮನೆಗಳಿಗೆ ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳನ್ನು ತಲುಪಿಸುವ ಕುರಿತಂತೆ ಪ್ರಸಾರ ಭಾರತಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ‘ಭಾಸ್ಕರಾಚಾರ್ಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಸ್ಪೇಸ್‌ ಅಪ್ಲಿಕೇಷನ್‌ ಆ್ಯಂಡ್‌ ಜಿಯೊ ಇನ್ಫೋರ್ಮ್ಯಾಟಿಕ್ಸ್‌’ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಕಟಣೆಯಲ್ಲಿ ಸರ್ಕಾರವು ತಿಳಿಸಿದೆ.

‘ಒಪ್ಪಂದದಡಿ ಕೇಂದ್ರ ಶಿಕ್ಷಣ ಸಚಿವಾಲಯದ ಸ್ವಯಂಪ್ರಭಾ ಹೆಸರಿನ 22 ಚಾನೆಲ್‌ಗಳು, ಎನ್‌ಸಿಇಆರ್‌ಟಿಯಿಂದ 1ನೇ ತರಗತಿಯಿಂದ 12ನೇ ತರಗತಿಯವರೆಗೆ ‘ಇ–ವಿದ್ಯಾ’ ಹೆಸರಿನ 12 ಚಾನೆಲ್‌, ಗುಜರಾತ್‌ ಸರ್ಕಾರದ ವಂದೇ ಗುಜರಾತ್‌(16 ಚಾನೆಲ್‌), ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ‘ಡಿಜಿಶಾಲಾ’(1 ಚಾನೆಲ್‌) ಎಲ್ಲ ದೂರದರ್ಶನ(ಡಿಡಿ)ದಲ್ಲಿ ಲಭ್ಯವಾಗಲಿದೆ ಎಂದು ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.