ಮುಜಾಫುರ್(ಬಿಹಾರ): ‘ತಾಕತ್ತಿದ್ದರೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಾಲ ಬಳಿ ಇಟ್ಟಿದ್ದ ಲಾಲೂ ಪ್ರಸಾದ್ ಅವರನ್ನು ಟೀಕಿಸಿ’ ಎಂದು ಜನ್ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವು ಬಿಹಾರದಲ್ಲಿ ಆರ್‌ಜೆಡಿ ಹಂಗಿನಲ್ಲಿ ಇದ್ದಂತಿದೆ. ಹಿಂದೆ ರಾಜ್ಯ ಕಾಂಗ್ರೆಸ್ ಘಟಕ ಲಾಲೂ ಪ್ರಸಾದ್ ಅವರ ನಿಯಂತ್ರಣದಲ್ಲಿತ್ತು. ಈಗ ಅವರ ಪುತ್ರ ತೇಜಸ್ವಿ ಯಾದವ್ ಆ ನಿಯಂತ್ರಣ ಹೊಂದಿದ್ದಾರೆ’ ಎಂದು ಟೀಕಿಸಿದ್ದಾರೆ.
‘ನನ್ನ ಅಭಿಪ್ರಾಯ ತಪ್ಪು ಎಂದಾದರೆ, ಅಂಬೇಡ್ಕರ್ ಭಾವಚಿತ್ರವನ್ನು ಕಾಲ ಬಳಿ ಇಟ್ಟುಕೊಂಡಿದ್ದ ಲಾಲೂ ಪ್ರಸಾದ್ ಅವರನ್ನು ರಾಹುಲ್ ಗಾಂಧಿ ಟೀಕಿಸಲಿ’ ಎಂದು ಹೇಳಿದ್ದಾರೆ.
ಇದೇ ವೇಳೆ, ಮುಜಾಫುರದಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಸಚಿವ, ಹಿರಿಯ ಬಿಜೆಪಿ ನಾಯಕ ಮಂಗಲ್ ಪಾಂಡೆ ರಾಜೀನಾಮೆ ನೀಡಬೇಕೆಂದೂ ಆಗ್ರಹಿಸಿದ್ದಾರೆ.
ಘಟನೆ ಏನು?
ಲಾಲೂ ಪ್ರಸಾದ್ ಅವರ 78ನೇ ಹುಟ್ಟುಹಬ್ಬದ ಕಾರ್ಯಕ್ರಮದ ವೇಳೆ ಸೋಫಾದ ಮೇಲೆ ಕೂತಿದ್ದ ಲಾಲೂ ಅವರ ಕಾಲಿನ ಬಳಿ ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟು ಅವರ ಬೆಂಬಗಲಿರು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.