ADVERTISEMENT

ಕೊವ್ಯಾಕ್ಸಿನ್: ಎರಡನೇ ಹಂತದ ’ಕ್ಲಿನಿಕಲ್‌ ಟ್ರಯಲ್‌’ಗೆ ಸಿದ್ಧತೆ

ಭುವನೇಶ್ವರದ ಐಎಂಎಸ್‌ ಮತ್ತು ಎಸ್‌ಯುಎಂ ಆಸ್ಪತ್ರೆ

ಪಿಟಿಐ
Published 31 ಆಗಸ್ಟ್ 2020, 8:29 IST
Last Updated 31 ಆಗಸ್ಟ್ 2020, 8:29 IST
ಕೋವಿಡ್‌ ಲಸಿಕೆ– ಪ್ರಾತಿನಿಧಿಕ ಚಿತ್ರ
ಕೋವಿಡ್‌ ಲಸಿಕೆ– ಪ್ರಾತಿನಿಧಿಕ ಚಿತ್ರ    

ಭುವನೇಶ್ವರ: ಕೊರೊನಾ ಸೋಂಕಿನ ವಿರುದ್ಧ ಹೋರಾಡುವುದಕ್ಕಾಗಿ ಹೈದರಾಬಾದ್ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ’ಕೋವ್ಯಾಕ್ಸಿನ್‌’ ಲಸಿಕೆಯ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಇಲ್ಲಿನ ಐಎಂಎಸ್‌ ಮತ್ತು ಎಸ್‌ಯುಎಂ ಆಸ್ಪತ್ರೆಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಮೊದಲ ಹಂತದ ಕ್ಲಿನಿಕಲ್ ಪ್ರಯೋಗ ಮುಂದುವರಿದಿದ್ದು, ಶೀಘ್ರದಲ್ಲೇ ಎರಡನೇ ಹಂತದ ಪ್ರಯೋಗ ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಎಸ್‌ಯುಎಂ ಆಸ್ಪತ್ರೆಯ ಕ್ಲಿನಿಕಲ್ ಟ್ರಯಲ್ ವಿಭಾಗದ ಪ್ರಧಾನ ಸಂಶೋಧಕ ಡಾ.ಇ.ವೆಂಕಟರಾವ್ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಲಸಿಕೆ ಪಡೆದಿರುವ ಸ್ವಯಂ ಸೇವಕರ ದೇಹದಲ್ಲಿ ಲಸಿಕೆಯಲ್ಲಿರುವ ರೋಗನಿರೋಧಕ ಅಂಶಗಳು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಗಮನಿಸಲಾಗಿದೆ. ’ಪ್ರಯೋಗಕ್ಕೆ ಒಳಪಟ್ಟವರ ಆರೋಗ್ಯದಲ್ಲಿ ಯಾವುದೇ ರೀತಿಯ ವತ್ಯಾಸಗಳಾಗಲಿ, ಅಡ್ಡಪರಿಣಾಮಗಳಾಗಲಿ ಕಂಡುಬಂದಿಲ್ಲ’ ಎಂದು ವೆಂಕಟರಾವ್ ತಿಳಿಸದ್ದಾರೆ.

ADVERTISEMENT

ದೆಹಲಿಯ ಭಾರತೀಯ ವೈದ್ಯಕೀಯ ಮಂಡಳಿ, ಕೋವ್ಯಾಕ್ಸಿನ್ ಲಸಿಕೆಯ ಮಾನವರ ಮೇಲಿನ ಪ್ರಯೋಗಕ್ಕಾಗಿ ದೇಶದಾದ್ಯಂತ 12 ವೈದ್ಯಕೀಯ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲಿ ಐಎಂಎಸ್‌ ಮತ್ತು ಎಸ್‌ಯುಎಂ ಆಸ್ಪತ್ರೆಯೂ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.