
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಚಂಡ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೊದಲು ವಾಯು ಸೇನೆಯ ಪೋಷಾಕಿನಲ್ಲಿ ಸಿದ್ಧಗೊಂಡರು
ಜೈಪುರ: ರಾಜಸ್ಥಾನದ ಜೈಸಲ್ಮೇರ್ ವಾಯುಸೇನಾ ನೆಲೆಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಪ್ರಚಂಡ’ ಲಘು ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಿದ್ದಾರೆ.
ಜೈಸಲ್ಮೇರ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಮುರ್ಮು ಅವರು ‘ಪ್ರಚಂಡ’ದಲ್ಲಿ ಹಾರಾಟ ನಡೆಸಿದರು ಎಂದು ವರದಿಯಾಗಿದೆ.
2025ರ ಅಕ್ಟೋಬರ್ 29ರಂದು ದ್ರೌಪದಿ ಮುರ್ಮು ಅವರು ರಫೇಲ್ ಯುದ್ಧ ವಿಮಾನ, 2023ರಲ್ಲಿ ಸುಖೋಯ್–30 ಎಂಕೆಐ ಯುದ್ಧ ವಿಮಾನದಲ್ಲಿ ದ್ರೌಪದಿ ಮುರ್ಮು ಅವರು ಹಾರಾಟ ನಡೆಸಿದ್ದರು. ಈ ಬಾರಿ ‘ಪ್ರಚಂಡ’ ಹೆಲಿಕಾಪ್ಟರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸೇನಾ ಸಮವಸ್ತ್ರ, ಹೆಲ್ಮೆಟ್ ಧರಿಸಿದ್ದ ಅವರು ಹಾರಾಟಕ್ಕೂ ಮುನ್ನ ಕಾಕ್‌ಪಿಟ್‌ನಿಂದ ಕೈ ಬೀಸಿದ್ದಾರೆ.
ಎಲ್‌ಸಿಎಚ್ ‘ಪ್ರಚಂಡ’ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಯುದ್ಧ ಹೆಲಿಕಾಪ್ಟರ್ ಆಗಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿಸಿದೆ.
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಸಶಸ್ತ್ರದಳದೊಂದಿಗಿನ ಸಂಬಂಧವನ್ನು ಇನ್ನಷ್ಟು ಆಳಕ್ಕೆ ವಿಸ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.