ADVERTISEMENT

ಹಣ ಅಕ್ರಮ ವರ್ಗಾವಣೆ: ಸತ್ಯೇಂದರ್‌ ಜೈನ್‌ ವಿಚಾರಣೆಗೆ ರಾಷ್ಟ್ರಪತಿ ಒಪ್ಪಿಗೆ

ಪಿಟಿಐ
Published 18 ಫೆಬ್ರುವರಿ 2025, 14:22 IST
Last Updated 18 ಫೆಬ್ರುವರಿ 2025, 14:22 IST
<div class="paragraphs"><p>ಸತ್ಯೇಂದರ್‌ ಜೈನ್‌</p></div>

ಸತ್ಯೇಂದರ್‌ ಜೈನ್‌

   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಎಪಿ ನಾಯಕ, ದೆಹಲಿಯ ಮಾಜಿ ಸಚಿವ ಸತ್ಯೇಂದರ್‌ ಜೈನ್ ಅವರ ವಿಚಾರಣೆ ನಡೆಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮತಿ ನೀಡಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್‌ 218ರ ಅಡಿಯಲ್ಲಿ ಅನುಮತಿ ಕೇಳಲಾಗಿತ್ತು.

ADVERTISEMENT

‘ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಯ ಅಂಶಗಳು ಮತ್ತು ಸಾಕ್ಷ್ಯಾಧಾರಗಳ ಆಧಾರದಲ್ಲಿ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರಪತಿ ಅವರಿಗೆ ಮನವಿ ಮಾಡಿತ್ತು’ ಎಂದು  ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿ ಸತ್ಯೇಂದರ್‌ ಜೈನ್‌ ಅವರನ್ನು  2022 ಮೇ ನಲ್ಲಿ ಇ.ಡಿ ಬಂಧಿಸಿತ್ತು. ಸದ್ಯ ಜಾಮೀನಿನ ಅವರು ಮೇಲೆ ಹೊರಗಿದ್ದಾರೆ. ಅವರ ವಿರುದ್ಧದ  ದೋಷಾರೋಪ ಪಟ್ಟಿಯನ್ನು ಇ.ಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.