ADVERTISEMENT

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ: ಹುತಾತ್ಮರ ನವೀಕೃತ ಸ್ಮಾರಕ ಉದ್ಘಾಟನೆ

ಪಿಟಿಐ
Published 28 ಆಗಸ್ಟ್ 2021, 15:27 IST
Last Updated 28 ಆಗಸ್ಟ್ 2021, 15:27 IST
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಅಮೃತಸರದಲ್ಲಿರುವ ಜಲಿಯನ್‌ ವಾಲಾ ಬಾಗ್ ಹುತಾತ್ಮರ ನವೀಕೃತ ಸ್ಮಾರಕ
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಅಮೃತಸರದಲ್ಲಿರುವ ಜಲಿಯನ್‌ ವಾಲಾ ಬಾಗ್ ಹುತಾತ್ಮರ ನವೀಕೃತ ಸ್ಮಾರಕ   

ಅಮೃತಸರ (ಪಿಟಿಐ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಹುತಾತ್ಮರನವೀಕೃತ ಸ್ಮಾರಕವನ್ನು ವರ್ಚುವಲ್‌ ವೇದಿಕೆಯಲ್ಲಿ ಉದ್ಘಾಟಿಸಿದರು.

ಉದ್ಘಾಟನೆಗೂ ಮುನ್ನ ಹತ್ಯಾಕಾಂಡದಲ್ಲಿ ಹುತಾತ್ಮರಾಗಿದ್ದವರ ನೆನಪಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು. ನವೀಕೃತ ಸ್ಮಾರಕದ ಬಳಿ ಐತಿಹಾಸಿಕ ಘಟನೆಯ ಚಿತ್ರಣವನ್ನು ನೀಡುವ ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲಾಗಿದೆ.

1919ರ ಏಪ್ರಿಲ್‌ 13 ರಂದು ನಡೆದಿದ್ದ, ಶಾಂತಿಯುತ ಪ್ರತಿಭಟನೆ ಮೇಲೆ ಬ್ರಿಟಿಷ್ ಸೇನೆ ಮನಸೋಇಚ್ಛೆ ಗುಂಡುಹಾರಿಸಿದ ಪರಿಣಾಮ ಸುಮಾರು 1000 ಮಂದಿ ಮೃತಪಟ್ಟಿದ್ದ ಘಟನೆ ಬಿಂಬಿಸಲು ಧ್ವನಿ ಮತ್ತು ಬೆಳಗಿನ ವ್ಯವಸ್ಥೆ ಅಳವಡಿಸಲಾಗಿದೆ.

ADVERTISEMENT

ಈವರೆಗೆ ಸಮರ್ಪಕವಾಗಿ ಬಳಕೆಯಾಗದಿದ್ದ ಕಟ್ಟಡದಲ್ಲಿ ನಾಲ್ಕು ಸಂಗ್ರಹಾಲಯ, ಗ್ಯಾಲರಿಗಳಿವೆ. ಇಲ್ಲಿ ದೃಶ್ಯ ಮತ್ತು ಶ್ರವ್ಯ ಮಾಧ್ಯಮ, 3ಡಿ ಪ್ರದರ್ಶನ, ಉಬ್ಬು ಚಿತ್ರಗಳ ಮೂಲಕ ಐತಿಹಾಸಿಕ ಘಟನೆಗಳ ಚಿತ್ರಣಗಳನ್ನು ಬಿಂಬಿಸಲಾಗಿದೆ.

ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಇತಿಹಾಸದ ಘಟನೆಗಳು ನಮಗೆ ಭವಿಷ್ಯದಲ್ಲಿ ಹೇಗೆ ಸಾಗಬೇಕು, ಸಾಗಬೇಕಾದ ಮಾರ್ಗ ಯಾವುದು ಎಂಬುದನ್ನು ತಿಳಿಸಲಿವೆ ಎಂದು ಪ್ರತಿಪಾದಿಸಿದರು.

ಸಿಖ್ಕರ ಪ್ರಾರ್ಥನೆ ‘ಗುರ್ಬಾನಿ’ಯು ಅನ್ಯರಿಗೆ ಸೇವೆ ಸಲ್ಲಿಸುವುದರಿಂದ ಸಂತಸ ಆವರಿಸಿಕೊಳ್ಳಲಿದೆ ಎಂಬುದನ್ನು ತಿಳಿಸಲಿದೆ. ಪಂಜಾಬ್ ಮತ್ತು ದೇಶವನ್ನು ಎಲ್ಲ ಆಯಾಮಗಳಿಂದ ಅಭಿವೃದ್ಧಿಗೊಳಿಸಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.