ADVERTISEMENT

ಆಲ್ಕೋಹಾಲ್‌ ಎಂದು ಸ್ಯಾನಿಟೈಜರ್ ಕುಡಿದ ವಿಚಾರಣಾಧೀನ ಕೈದಿ ಸಾವು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 6:50 IST
Last Updated 27 ಮಾರ್ಚ್ 2020, 6:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಲಕ್ಕಾಡ್: ಸ್ಯಾನಿಟೈಜರ್ ಅನ್ನು ಆಲ್ಕೋಹಾಲ್ ಎಂದು ಕುಡಿದ ವಿಚಾರಣಧೀನ ಕೈದಿಯೊಬ್ಬರು ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರುವರಿ 18ರಿಂದ ವಿಚಾರಣಧೀನ ಕೈದಿಯಾಗಿ ಜೈಲಿನದ್ದಿದ್ದ ರಮಣ್‌ಕುಟ್ಟಿ ಎಂಬಾತ ಮಂಗಳವಾರ ಜೈಲಿನಲ್ಲಿ ಕುಸಿದುಬಿದ್ದಿದ್ದ. ಆತನನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು

''ರಾಜ್ಯ ಸರ್ಕಾರದ ಸೂಚನೆಯಂತೆ ಜೈಲು ಆವರಣದಲ್ಲಿ (ಕೈದಿಗಳಿಂದ) ತಯಾರಿಸಿದ್ದ ಬಾಟಲಿಯಲ್ಲಿದ್ದ ಸ್ಯಾನಿಟೈಸರ್ ಅನ್ನು ಸೇವಿಸಿದ್ದಾರೆ ಎಂಬ ಅನುಮಾನವಿದೆ" ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಮಂಗಳವಾರ ರಾತ್ರಿ ಆರಾಮಾಗಿದ್ದ ಆತ ಬುಧವಾರ ರೋಲ್ ಕರೆಗೂ ಹಾಜರಾಗಿದ್ದ. ಆದರೆ ಬೆಳಗ್ಗೆ 10.30ರ ಸುಮಾರಿಗೆ ಕುಸಿದು ಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನ ಅಧಿಕಾರಿಗಳು ಐಸೊಪ್ರೊಪಿಲ್ ಆಲ್ಕೋಹಾಲ್ (ರಬ್ಬಿಂಗ್ ಆಲ್ಕೋಹಾಲ್‌) ಅನ್ನು ಹ್ಯಾಂಡ್ ಸ್ಯಾನಿಟೈಸರ್‌ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಸುತ್ತಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.