ADVERTISEMENT

ಕೊರೊನಾ ರೋಗಾಣು ಪರೀಕ್ಷೆ ಪರವಾನಗಿ ಖಾಸಗಿ ಲ್ಯಾಬ್‌‌ಗೆ

ಏಜೆನ್ಸೀಸ್
Published 18 ಮಾರ್ಚ್ 2020, 12:43 IST
Last Updated 18 ಮಾರ್ಚ್ 2020, 12:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸ್ವಿಜರ್ಲೆಂಡ್ ಮೂಲದ 'ರೊಶೆ ಡಯಾಗ್ನಟಿಕ್ಸ್ ಇಂಡಿಯಾ ಸಂಸ್ಥೆ' ಕೊರೊನಾ ರೋಗಾಣು ಪತ್ತೆ ಮಾಡಲು ಕೇಂದ್ರಸರ್ಕಾರದಿಂದ ಅಧಿಕೃತವಾಗಿ ಪರವಾನಗಿ ಪಡೆದಿದೆ.

ಇದರಿಂದಾಗಿ ಈ ಸಂಸ್ಥೆ ಕೊರೊನಾ ರೋಗಾಣುಪತ್ತೆ ಮಾಡಲು ಪರವಾನಗಿ ಪಡೆದ ಪ್ರಥಮ ಖಾಸಗಿ ಲ್ಯಾಬ್ ಆಗಿದೆ.ಈ ಸಂಸ್ಥೆಯು ಸ್ವಿಜರ್ಲೆಂಡ್ ನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಈ ಲ್ಯಾಬ್ವಿದೇಶದಲ್ಲಿ ಅತಿ ಬೇಗ ಕೊರೊನಾ ಸೋಂಕು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಇದರಿಂದಾಗಿ ಕೇಂದ್ರ ಸರ್ಕಾರಈ ಸಂಸ್ಥೆಗೆ ಕೊರೊನಾ ಸೋಂಕು ಪತ್ತೆ ಹಚ್ಚುವ ಪರವಾನಗಿ ನೀಡಿರುವುದಾಗಿ ಎಎನ್‌‌ಐ ಸಂಸ್ಥೆ ತಿಳಿಸಿದೆ.

ಈ ಸಂಸ್ಥೆ ವಿದೇಶದಲ್ಲಿಕಡಿಮೆ ಅವಧಿಯಲ್ಲಿ ಕೊರೊನಾ ಸೋಂಕು ಪತ್ತೆ ಮಾಡುವ ಲ್ಯಾಬ್‌ಗಳಲ್ಲಿಮುಂಚೂಣಿಯಲ್ಲಿದೆ ಎನ್ನಲಾಗಿದೆ. ಕೊವಿಡ್-19 ರಕ್ತ ಪರೀಕ್ಷೆ ನಡೆಸಲು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಲ್ಯಾಬೊರೇಟರಿ ಅಗತ್ಯವಿದೆ. ಭಾರತದಲ್ಲಿಇಂತಹ ಲ್ಯಾಬ್‌‌ಗಳು ಇರುವುದು ಕಡಿಮೆ.

ADVERTISEMENT

ಭಾರತೀಯ ಔಷಧ ಸಂಶೋಧನಾಲಯ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ನಿಯಮಗಳಿಗೆ ಅನುಗುಣವಾಗಿ ಲ್ಯಾಬೊರೇಟರಿಗಳು ಕಾರ್ಯನಿರ್ವಹಿಸಬೇಕಾಗುತ್ತದೆ.ಭಾರತದಲ್ಲಿ ಇಂತಹ 72 ಅತ್ಯಾಧುನಿಕ ಲ್ಯಾಬೊರೇಟರಿಗಳಿದ್ದು, ಬರುವ ವಾರದಲ್ಲಿ 49 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಕೇಂದ್ರ ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ಈ ಸಂಬಂಧ ಮಾತನಾಡಿದ ಕೇಂದ್ರ ಆರೋಗ್ಯ ಸಂಶೋಧನಾಲಯದ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ್ , ಎನ್ ಎಬಿಎಲ್ ಸಂಸ್ಥೆಯಿಂದ ಮಾನ್ಯತೆ ಪಡೆದ ಲ್ಯಾಬ್ ಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಭವಿಷ್ಯದಲ್ಲಿಉತ್ತಮ ಫಲಿತಾಂಶ ನೀಡಲಿದೆ ಎಂದಿದ್ದಾರೆ.

ಪ್ರಸ್ತುತ 147 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, ಮೂರು ಸಾವು ಸಂಭವಿಸಿದೆ.ವಿಶ್ವದಾದ್ಯಂತ 167,511 ಸೋಂಕು ಪ್ರಕರಣ ಪತ್ತೆಯಾಗಿದ್ದು, ವಿಶ್ವದ 152 ದೇಶಗಳಲ್ಲಿ 6,606 ಮಂದಿ ಸಾವನ್ನಪ್ಪಿದ್ದಾರೆ ಎಂದು ಎಎನ್ ಐ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.