ADVERTISEMENT

ವಿರೋಧದ ನಡುವೆಯೇ ರಾಜ್ಯಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ

ಬಿಜೆಪಿ ಸದಸ್ಯ ಕಿರೋಡಿ ಲಾಲ್ ಮೀನಾ ಅವರಿಂದ ಖಾಸಗಿ ಮಸೂದೆ

ಐಎಎನ್ಎಸ್
Published 9 ಡಿಸೆಂಬರ್ 2022, 12:36 IST
Last Updated 9 ಡಿಸೆಂಬರ್ 2022, 12:36 IST
   

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯ ಖಾಸಗಿ ಮಸೂದೆಯನ್ನು ಶುಕ್ರವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಮಂಡಿಸಲಾಯಿತು.

ಈ ಮಸೂದೆಯನ್ನು ಬಿಜೆಪಿ ಸದಸ್ಯ ಕಿರೋಡಿ ಲಾಲ್ ಮೀನಾ ಮಂಡಿಸಿದರು.

ಒಟ್ಟು 63 ಸದಸ್ಯರು ಮಸೂದೆ ಪರವಾಗಿ ಮತ ಹಾಕಿದರೆ, 23 ಸದಸ್ಯರು ವಿರುದ್ಧವಾಗಿ ಮತಚಲಾಯಿಸಿದರು.

ADVERTISEMENT

ಮಸೂದೆಯನ್ನು ವಿರೋಧಿಸಿ ಬಿಜು ಜನತಾ ದಳ ಸದನದಿಂದ ಹೊರನಡೆದರೆ, ಕಾಂಗ್ರೆಸ್, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ ಮತ್ತು ಡಿಎಂಕೆ ಪ್ರತಿಭಟನೆ ನಡೆಸಿದವು.

ಹಲವು ಚುನಾವಣೆಗಳಲ್ಲಿ ಯುಸಿಸಿ ಬಿಜೆಪಿಯ ಪ್ರಣಾಳಿಕೆ ಅಂಶವೂ ಆಗಿದೆ. ಆದರೆ, ಈ ವರೆಗೆ ಮಸೂದೆಯನ್ನು ಮಂಡಿಸಿಲ್ಲ.

ನಾಗರಿಕರ ವೈಯಕ್ತಿಕ ಕಾನೂನುಗಳನ್ನು ರೂಪಿಸುವ ಮತ್ತು ಕಾರ್ಯಗತಗೊಳಿಸುವ ಯುಸಿಸಿ, ಧರ್ಮ, ಲಿಂಗದ ದೃಷ್ಟಿಕೋನವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಅನ್ವಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.