ADVERTISEMENT

ಬಿಹಾರದ ಜನರಿಗೆ ಬದಲಾವಣೆ ಬೇಕಿದೆ; ಹೀಗಾಗಿ ಹೆಚ್ಚು ಮತದಾನವಾಗಿದೆ: ಪ್ರಿಯಾಂಕಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2025, 11:18 IST
Last Updated 8 ನವೆಂಬರ್ 2025, 11:18 IST
<div class="paragraphs"><p>ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ</p></div>

ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ

   

ಪಿಟಿಐ ಚಿತ್ರ

ಕತಿಹಾರ್: ಜನರು ಬದಲಾವಣೆ ಬಯಸಿದ್ದಾರೆ ಹೀಗಾಗಿ ಬಿಹಾರದಲ್ಲಿ ಹೆಚ್ಚಿನ ಪ್ರಮಾಣದ ಮತದಾನ ಆಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ADVERTISEMENT

‘ಜನ ಬದಲಾವಣೆ ಬಯಸಿದ್ದರೆ. ಇದನ್ನು ನಾನು ಎಲ್ಲಾ ಸಮಾವೇಶದಲ್ಲೂ ನೋಡಿದ್ದೇನೆ. ನಾನು ಮಾತನಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಜನರೇ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಜನರಿಗೆ ಬದಲಾವಣೆ ಬೇಕಿದೆ. ಅವರು ಬೇಸತ್ತು ಹೋಗಿದ್ದಾರೆ. ಗಮನವನ್ನು ಬೇರೆಡೆ ಸೆಳೆಯುವ ಯಾವ ಕೆಲಸವೂ ನಡೆಯುತ್ತಿಲ್ಲ. ನಮ್ಮ ಭವಿಷ್ಯ ಹಾಗೂ ಅಭಿವೃದ್ಧಿಯ ಬಗ್ಗೆ ಮಾತನಾಡಿ ಎಂದು ಎಲ್ಲಾ ಪಕ್ಷಗಳನ್ನು ಕೇಳುತ್ತಿದ್ದಾರೆ’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಬಿಹಾರ ವಿಧಾನಸಭೆಗೆ ಗುರುವಾರ ನಡೆದ ಮೊದಲ ಹಂತದ ಚುನಾವಣೆ ನಡೆದಿದ್ದು, ಶೇ 64.66ರಷ್ಟು ಮತದಾನವಾಗಿದೆ. ಇದು ಈವರೆಗೆ ದಾಖಲಾದ ಅತಿ ಹೆಚ್ಚು ಮತದಾನ ಪ್ರಮಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.