ADVERTISEMENT

'ನಾನು ಮೋದಿ' ಎಂದು ಹೇಳುವ ಮೂಲಕ ಏನು ಹೇಳಲು ಹೊರಟಿದ್ದೀರಿ?: ಪ್ರಿಯಾಂಕಾ ಗಾಂಧಿ

ಪಿಟಿಐ
Published 28 ಏಪ್ರಿಲ್ 2019, 12:40 IST
Last Updated 28 ಏಪ್ರಿಲ್ 2019, 12:40 IST
   

ಅಮೇಠಿ: ನಾನು ಮೋದಿ (ಮೈ ಹೂಂ ಮೋದಿ) ಎಂದು ಹೇಳುವುದರಲ್ಲಿ ಯಾವ ರೀತಿಯ ರಾಷ್ಟ್ರೀಯತೆ ಇದೆ?.ರಾಷ್ಟ್ರೀಯತೆಯ ಅರ್ಥ ಏನು? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

ಭಾನುವಾರ ಅಮೇಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕಾ, ರಾಷ್ಟ್ರೀಯತೆ ಅಂದರೆ ದೇಶಪ್ರೇಮ ಮತ್ತು ದೇಶದ ಕಡೆಗಿರುವ ಒಲವು.ದೇಶ ಎಂದರೆ ಯಾರು? ಅಲ್ಲಿನ ಜನರು ಮತ್ತು ಅವರ ಪ್ರೀತಿ. ನಿಮಗೆ ನಿಮ್ಮ ಬಗ್ಗೆ ಮಾತ್ರ ಪ್ರೀತಿ ಇದ್ದರೆ, ಅದು ಯಾವ ರೀತಿಯ ರಾಷ್ಟ್ರೀಯತೆ? ಎಂದು ಕೇಳಿದ್ದಾರೆ.

ಹಣ ಬಲದಿಂದ ಜನರನ್ನು ಸೇರಿಸಿ ಅವರನ್ನುದ್ದೇಶಿಸಿ ಮಾತನಾಡಿ ಅಥವಾ ಅವರಿಗೆ ಸಂದೇಶ ನೀಡುವುದು ತುಂಬಾ ಸುಲಭ.ಆದರೆ ನಿಜವಾದ ಕಾಳಜಿ ಅಂದರೆ ಜನರ ಸಮಸ್ಯೆಗಳನ್ನು ಬಗೆ ಹರಿಸಬೇಕು. ಜನರ ನಿಜವಾದ ಪರಿಸ್ಥಿತಿ ವಿಭಿನ್ನವಾಗಿರುತ್ತದೆ.ನೀವು ಜನರಲ್ಲಿ ಮಾತನಾಡಿಸಿದರೆ ಅವರಲ್ಲಿಂದ ಬೇರೆಯೇ ರೀತಿಯ ಮಾತುಗಳು ಹೊರಬರುತ್ತವೆ. ಈ ರೀತಿಯ ಮಾತುಗಳನ್ನು ಪ್ರಧಾನಿಯಾಗಲಿ, ಬಿಜೆಪಿ ನೇತಾರರಾಗಲೀ ಒಪ್ಪಿದ್ದನ್ನು ನಾನು ನೋಡಿಲ್ಲ.

ADVERTISEMENT

ಮೋದಿವಾರಣಾಸಿ ಲೋಕಸಭಾ ಕ್ಷೇತ್ರದ ಯಾವೊಂದು ಗ್ರಾಮಕ್ಕೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿಲ್ಲ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ .

ಬಿಜೆಪಿಯ ನೀತಿಗಳೆಲ್ಲವೂ ಜನ ವಿರೋಧಿ, ಯುವ ಜನ ವಿರೋಧಿ ಮತ್ತು ರೈತ ವಿರೋಧಿಯಾಗಿದೆ.ಇಲ್ಲಿ ಬಿಡಾಡಿ ಪ್ರಾಣಿಗಳ ಹಾವಳಿ ಜಾಸ್ತಿಯಾಗಿದೆ. ರೈತರು ಅವರ ಬೆಳೆಗಳನ್ನು ರಕ್ಷಿಸಲು ರಾತ್ರಿ ಜಾಗರಣೆ ಮಾಡಬೇಕಾಗುತ್ತದೆ.ಕೆಲವೊಂದು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ ಎಂದಿದ್ದಾರೆ ಪ್ರಿಯಾಂಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.