ADVERTISEMENT

3 ದಿನಗಳ ವಯನಾಡ್ ಪ್ರವಾಸ ಆರಂಭಿಸಿದ ಪ್ರಿಯಾಂಕಾ ಗಾಂಧಿ

ಪಿಟಿಐ
Published 27 ಮಾರ್ಚ್ 2025, 8:11 IST
Last Updated 27 ಮಾರ್ಚ್ 2025, 8:11 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ವಯನಾಡ್(ಕೇರಳ): ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೂರು ದಿನಗಳ ತಮ್ಮ ಕ್ಷೇತ್ರ ಪ್ರವಾಸ ಕೈಗೊಂಡಿದ್ದು, ಇಂದು (ಗುರುವಾರ) ವಯನಾಡ್‌ಗೆ ಆಗಮಿಸಿದ್ದಾರೆ.

ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಿಯಾಂಕಾ, ವಯನಾಡಿಗೆ ಪ್ರಯಾಣ ಬೆಳೆಸಿದರು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪ್ರಿಯಾಂಕಾ ಅವರು ಪುಲ್ಪಳ್ಳಿಯ ಶ್ರೀ ಸೀತಾ ದೇವಿ ಲವ ಕುಶ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಕ್ಷೇತ್ರ ಭೇಟಿ‌ ಆರಂಭಿಸಲಿದ್ದಾರೆ. ಬಳಿಕ ಸುಲ್ತಾನ್‌ ಬತ್ತೇರಿಯ ಪುಲ್ಪಲ್ಲಿ ಗ್ರಾಮ ಪಂಚಾಯತ್‌ನಲ್ಲಿ ಹೊಸ ಗ್ರಾಮ ಪಂಚಾಯತ್‌ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ.

ADVERTISEMENT

ಸುಲ್ತಾನ್ ಬತ್ತೇರಿಯ ಮೀನಂಗಡಿಯಲ್ಲಿರುವ ಗ್ರಾಮ ಪಂಚಾಯತ್‌ ಸಮುದಾಯ ಭವನದಲ್ಲಿ ‘ವನಿತಾ ಸಂಗಮ’ವನ್ನು ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ಕಲ್ಪೆಟ್ಟಾದ ಡಬ್ಯುಎಂಒ ಮುಟ್ಟಿಲ್‌ನಲ್ಲಿ ‘ಒಂದು ಶಾಲೆ, ಒಂದು ಆಟ’ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಕಾಂಗ್ರೆಸ್‌ ತಿಳಿಸಿದೆ.

ವಯನಾಡಿನ ಮುಂಡಕ್ಕೈ ಮತ್ತು ಚೂರಲ್‌ಮಲದಲ್ಲಿ ಭೂಕುಸಿತದಲ್ಲಿ ಬದುಕುಳಿದವರಿಗಾಗಿ ಉದ್ಧೇಶಿತ ಟೌನ್‌ಶಿಪ್‌ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ನಂತರ ಸಂಜೆ 5.15ಕ್ಕೆ ಮಾನಂತವಾಡಿಯ ವಲ್ಲಿಯೂರ್ಕಾವು ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.