ADVERTISEMENT

ಪುಣೆ: ಅಬ್ದುಲ್‌ ಕಲಾಂ ಅವರ ಮಾರ್ಗದರ್ಶಕರಾಗಿದ್ದ ವಿಜ್ಞಾನಿ ಇ.ವಿ. ಚಿತ್ನಿಸ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2025, 8:35 IST
Last Updated 22 ಅಕ್ಟೋಬರ್ 2025, 8:35 IST
<div class="paragraphs"><p>ಪ್ರೊ. ಏಕನಾಥ್‌ ವಸಂತ್‌ ಚಿತ್ನಿಸ್‌</p></div>

ಪ್ರೊ. ಏಕನಾಥ್‌ ವಸಂತ್‌ ಚಿತ್ನಿಸ್‌

   

ಕೃಪೆ: X / @AjitPawarSpeaks

ಪುಣೆ: ಭಾರತದ ಬಾಹ್ಯಾಕಾಶ ಕ್ಷೇತ್ರದ ಪಿತಾಮಹ ಡಾ. ವಿಕ್ರಮ್‌ ಸಾರಾಬಾಯಿ ಅವರೊಂದಿಗೆ ಕೆಲಸ ಮಾಡಿದ್ದ ವಿಜ್ಞಾನಿ, ಪ್ರೊ. ಏಕನಾಥ್‌ ವಸಂತ್‌ ಚಿತ್ನಿಸ್‌ ಅವರು ಪುಣೆಯಲ್ಲಿ ಬುಧವಾರ ನಿಧನರಾಗಿದ್ದಾರೆ.

ADVERTISEMENT

ಭಾರತದ ರಾಷ್ಟ್ರಪತಿಯಾಗುವ ಮುನ್ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಹಾ ನಿರ್ದೇಶಕರಾಗಿದ್ದ ವಿಜ್ಞಾನಿ, ದಿವಂಗತ ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಮಾರ್ಗದರ್ಶಕರಾಗಿದ್ದ ಚಿತ್ನಿಸ್‌ ಅವರಿಗೆ 100 ವರ್ಷ ವಯಸ್ಸಾಗಿತ್ತು.

ಪ್ರೊ. ಚಿತ್ನಿಸ್‌ ಅವರು ಪುತ್ರ ಡಾ. ಚೇತನ್‌ ಚಿತ್ನಿಸ್‌, ಸೊಸೆ ಅಂಬಿಕಾ ಮತ್ತು ಮೊಮ್ಮಕ್ಕಳಾದ ತಾರಿಣಿ ಹಾಗು ಚಾಂದಿನಿ ಅವರನ್ನು ಅಗಲಿದ್ದಾರೆ.

ʼಪ್ರೊ. ಇ.ವಿ ಚಿತ್ನಿಸ್‌ ಅವರು ನುರಿತ ವಿಜ್ಞಾನಿ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನಿರ್ಮಾತೃಗಳಲ್ಲಿ ಒಬ್ಬರು. ಅವರು ಇನ್ನಿಲ್ಲ ಎಂಬುದು ನೋವಿನ ಸಂಗತಿʼ ಎಂದು ರಾಷ್ಟ್ರೀಯ ವಿಜ್ಞಾನ ಸಂವಹನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುಹಾಸ್‌ ನಾಯಕ್‌ ತಿಳಿಸಿದ್ದಾರೆ.

1925ರ ಜುಲೈ 25 ರಂದು ಚಿತ್ನಿಸ್‌ ಅವರಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಪುಣೆಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಜಿಸಲಾಗಿತ್ತು ಎಂದೂ ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.