ನವದೆಹಲಿ: ಭಾರತ–ಪಾಕಿಸ್ತಾನ ಗಡಿಯಲ್ಲಿರುವ ಪಂಜಾಬ್‌ನ 3 ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿದಿನ ಸಂಜೆ ನಡೆಯುತ್ತಿದ್ದ ಕವಾಯತನ್ನು (ಬೀಟಿಂಗ್ ರಿಟ್ರೀಟ್) ಸ್ಥಗಿತಗೊಳಿಸಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುರುವಾರ ತಿಳಿಸಿದೆ.
ಭಾರತ–ಪಾಕಿಸ್ತಾನದ ನಡುವಿನ ಪರಿಸ್ಥಿತಿ ವಿಷಮಗೊಂಡಿರುವ ಕಾರಣ ಸಾರ್ವಜನಿಕರ ಸುರಕ್ಷತಾ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ಬಿಎಸ್‌ಎಫ್ ಹೇಳಿದೆ. ಮುಂದಿನ ಆದೇಶದವರೆಗೂ ಸಾರ್ವಜನಿಕರಿಗೆ ಚೆಕ್‌ಪೋಸ್ಟ್‌ಗಳ ಪ್ರವೇಶ ನಿಷೇಧಿಸಲಾಗಿರುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಅಮೃತಸರದ ಅಟ್ಟಾರಿ–ವಾಘಾ ಗಡಿ, ಫಿರೋಜ್‌ಪುರದ ಹುಸೈನಿವಾಲಾ, ಫಾಜಿಲ್ಕಾ ಜಿಲ್ಲೆಯ ಸಡ್ಕಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿದಿನ ಸಂಜೆ ‘ಬೀಟಿಂಗ್ ರಿಟ್ರೀಟ್’ ನಡೆಯುತ್ತಿತ್ತು. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬೆನ್ನಲ್ಲೇ ರಿಟ್ರೀಟ್ ಸ್ಥಗಿತಗೊಳಿಸಿರುವುದು ಮಹತ್ವ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.