ADVERTISEMENT

ಪಂಜಾಬ್‌ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಸ್ಫೋಟ: ಕಣ್ಣೀರಿಟ್ಟ ಶಾಸಕ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 17:00 IST
Last Updated 26 ಸೆಪ್ಟೆಂಬರ್ 2021, 17:00 IST
ಪಕ್ಷದ ನಾಯಕರೊಂದಿಗೆ ಸಿಎಂ ಚನ್ನಿ ಸಮಾಲೋಚನೆ
ಪಕ್ಷದ ನಾಯಕರೊಂದಿಗೆ ಸಿಎಂ ಚನ್ನಿ ಸಮಾಲೋಚನೆ    

ಚಂಡೀಗಡ:ಸಂಪುಟ ವಿಸ್ತರಣೆ ಬೆನ್ನಲ್ಲೇ ಭಿನ್ನಮತ ಕಂಡುಬಂದಿದೆ. ತಮ್ಮನ್ನು ಕಾರಣವಿಲ್ಲದೇ ಸಂಪುಟದಿಂದ ಕೈಬಿಡಲಾಗಿದೆ ಎಂಬ ಕೂಗು ಎದ್ದಿದೆ.

ಪ್ರಮಾಣವಚನ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಬಲ್ಬೀರ್ ಸಿಂಗ್ ಸಿಧು ಹಾಗೂ ಗುರುಪ್ರೀತ್ ಸಿಂಗ್ ಕಾಂಗಾರ್ ಅವರು ತಮ್ಮನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿದರು. ಬಲ್ಬೀರ್ ಸಿಧು ಅವರು ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟರು.

ಆರು ಬಾರಿ ಶಾಸಕ ರಾಕೇಶ್ ಪಾಂಡೆ ಅವರು ಅಸಮಾಧಾನ ಹೊರಹಾಕಿದ್ದಾರೆ. ಸಂಪುಟಕ್ಕೆ ರಾಣಾ ಗುರ್ಜಿತ್ ಸಿಂಗ್ ಅವರ ಸೇರ್ಪಡೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಭ್ರಷ್ಟಾಚಾರ ಆರೋಪ ಇರುವ ಅವರ ಬದಲಾಗಿ ದಲಿತ ನಾಯಕನ ಆಯ್ಕೆ
ಯಾಗಬೇಕು ಎಂದು ಮುಖಂಡರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.