ADVERTISEMENT

ಪಂಜಾಬ್‌: ನಾಳೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

ಪಿಟಿಐ
Published 25 ಸೆಪ್ಟೆಂಬರ್ 2021, 7:26 IST
Last Updated 25 ಸೆಪ್ಟೆಂಬರ್ 2021, 7:26 IST
ಚರಣ್‌ಜಿತ್ ಸಿಂಗ್‌ ಚನ್ನಿ
ಚರಣ್‌ಜಿತ್ ಸಿಂಗ್‌ ಚನ್ನಿ   

ಚಂಡಿಗಡ: ನೂತನ ಸಚಿವ ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮಗೊಂಡಿದ್ದು,ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಅವರು ಇಂದು(ಶನಿವಾರ) ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಚನ್ನಿಯವರು ಮಧ್ಯಾಹ್ನ 12.30ಗೆ ರಾಜ್ಯಪಾಲರನ್ನು ಭೇಟಿಯಾಗುವ ನಿರೀಕ್ಷೆ ಇದ್ದು ಭಾನುವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಚನ್ನಿ ಅವರು ನೂತನ ಸಚಿವ ಸಂಪುಟಕ್ಕೆ ಸೇರುವ ‌‌ಶಾಸಕರನ್ನು ಅಂತಿಮಗೊಳಿಸುವ ಕುರಿತು ‌ ಹೈಕಮಾಂಡ್‌ ನೊಂದಿಗೆ ಚರ್ಚಿಸಿ ಶನಿವಾರ ದೆಹಲಿಯಿಂದ ವಾಪಸಾದ ಕೆಲವು ಗಂಟೆಗಳ ನಂತರ ಈ ಬೆಳವಣಿಗೆಗಳು ನಡೆದಿವೆ.

ADVERTISEMENT

ಚನ್ನಿ ನೇತೃತ್ವದ ಸಚಿವ ಸಂಪುಟದಲ್ಲಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಅಮರಿಂದರ್ ಸಿಂಗ್ ಸಚಿವ ಸಂಪುಟದಲ್ಲಿದ್ದ ಐವರು ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಕಾಂಗ್ರೆಸ್‌ ಹೈಕಮಾಂಡ್ ಚನ್ನಿ ಅವರಿಗೆ ದೆಹಲಿಗೆ ಬರುವಂತೆ ಶುಕ್ರವಾರ ಸೂಚನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.