ADVERTISEMENT

ಬಿಜೆಪಿ ಅಣತಿ ಪಾಲಿಸುತ್ತಿರುವ ಪಂಜಾಬ್ ರಾಜ್ಯಪಾಲ: ಎಎಪಿ ಆರೋಪ

ಪಿಟಿಐ
Published 24 ಸೆಪ್ಟೆಂಬರ್ 2022, 15:41 IST
Last Updated 24 ಸೆಪ್ಟೆಂಬರ್ 2022, 15:41 IST
ಭನ್ವಾರಿ ಲಾಲ್ ಪುರೋಹಿತ್ 
ಭನ್ವಾರಿ ಲಾಲ್ ಪುರೋಹಿತ್    

ಚಂಡೀಗಢ: ಪಂಜಾಬ್ ರಾಜ್ಯಪಾಲ ಬನ್ವಾರಿ ಪುರೋಹಿತ್ ಅವರವಿರುದ್ಧ ಶನಿವಾರ ವಾಗ್ದಾಳಿ ನಡೆಸಿರುವ ಆಡಳಿತಾರೂಢ ಆಮ್‌ ಆದ್ಮಿ ಪಕ್ಷವು (ಎಎಪಿ), ರಾಜ್ಯಪಾಲರು ಬಿಜೆಪಿ ಅಣತಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಸುದ್ದಿಗಾರರ ಜತೆಗೆ ಮಾತನಾಡಿದ ಸಚಿವ ಅಮನ್ ಅರೋರಾ, ‘ಪಂಜಾಬ್ಸರ್ಕಾರವು ಯಾವುದೇ ಸಂಘರ್ಷವನ್ನು ಬಯಸುವುದಿಲ್ಲ. ಆದರೆ, ಯಾರಾದರೂ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರೆ ಅದನ್ನು ಆಡಳಿತ ಪಕ್ಷವು ಒಪ್ಪಿಕೊಳ್ಳುವುದಿಲ್ಲ. ‘ಆಪರೇಷನ್ ಕಮಲ’ವನ್ನು ಯಶಸ್ವಿಗೊಳಿಸುವ ಸಲುವಾಗಿಯೇ ಕೇಂದ್ರದ ನಿರ್ದೇಶನದ ಮೇರೆಗೆ ಸೆ. 22ರಂದು ನಿಗದಿಯಾಗಿದ್ದ ವಿಶೇಷ ಅಧಿವೇಶನವನ್ನು ರಾಜ್ಯಪಾಲರು ರದ್ದುಗೊಳಿಸಿದ್ದಾರೆ’ ಎಂದು ಆರೋಪಿಸಿದರು.

ಇದೇ 27ರಂದು ವಿಧಾನಸಭೆ ಅಧಿವೇಶನದಲ್ಲಿನ ಶಾಸಕಾಂಗದ ವ್ಯವಹಾರದ ವಿವರಗಳನ್ನು ರಾಜ್ಯಪಾಲರ ಕಚೇರಿಯು ಕೇಳಿತ್ತು. ಈ ವಿವರಣೆ ಕೇಳಿದ ಒಂದು ದಿನದ ಬಳಿಕ ಎಎಪಿಯು ರಾಜ್ಯಪಾಲರ ವಿರುದ್ಧ ಆರೋಪ ಮಾಡಿದೆ.ಸೆ. 22ರಂದು ವಿಶ್ವಾಸ ಗೊತ್ತುವಳಿಯ ವೇಳೆ ವಿಧಾನಸಭೆಯ ವಿಶೇಷ ಅಧಿವೇಶನ ನಡೆಸದಂತೆ ರಾಜ್ಯ ಸರ್ಕಾರವನ್ನು ರಾಜ್ಯಪಾಲರು ತಡೆಹಿಡಿದಿದ್ದರು. ಇದನ್ನೂ ಎಎಪಿ ಕಟುವಾಗಿ ಟೀಕಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.