ADVERTISEMENT

ಪಂಜಾಬ್‌: ಅಂತರ್ಜಾಲ ನಿರ್ಬಂಧ ಅವಧಿ ವಿಸ್ತರಣೆ

ಪಿಟಿಐ
Published 20 ಮಾರ್ಚ್ 2023, 13:16 IST
Last Updated 20 ಮಾರ್ಚ್ 2023, 13:16 IST
   

ಚಂಡೀಗಢ: ಖಾಲಿಸ್ತಾನ ಪರ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್‌ ಸಿಂಗ್‌ನ ಪತ್ತೆ ಕಾರ್ಯಾಚರಣೆಯು ಮೂರನೇ ದಿನವೂ ಮುಂದುವರಿದಿದೆ. ಈ ವೇಳೆ ‘ರಾಜ್ಯದಲ್ಲಿ ಮೊಬೈಲ್‌ ಅಂತರ್ಜಾಲ ಹಾಗೂ ಸಂದೇಶ ರವಾನೆಗೆ ಹೇರಿದ್ದ ನಿರ್ಬಂಧವನ್ನು ಮಂಗಳವಾರ ಸಂಜೆಯವರೆಗೂ ವಿಸ್ತರಿಸಲಾಗುವುದು’ ಎಂದು ಪಂಜಾಬ್‌ ಸರ್ಕಾರ ಹೇಳಿದೆ.

ಅಂತರ್ಜಾಲ ಹಾಗೂ ಸಂದೇಶ ಸೇವೆಯನ್ನು ಭಾನುವಾರದ ಸಂಜೆಯವರೆಗೂ ನಿರ್ಬಂಧಿಸಿ ಶನಿವಾರ ಆದೇಶಿಸಲಾಗಿತ್ತು. ಇದನ್ನು ನಂತರ ಸೋಮವಾರ ಸಂಜೆವರೆಗೂ ವಿಸ್ತರಿಸಲಾಗಿತ್ತು. ಬ್ಯಾಂಕ್‌, ಆಸ್ಪತ್ರೆ ಹಾಗೂ ಇತರ ಅಗತ್ಯ ಸೇವೆಗಳಿಗೆ ಅಡಚಣೆ ಉಂಟಾಗುವ ಕಾರಣ ಬ್ರಾಡ್‌ಬ್ಯಾಂಡ್‌ ಸೇವೆಗೆ ನಿರ್ಬಂಧ ಹೇರಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT