ADVERTISEMENT

ಭಯೋತ್ಪಾದಕ ಜಾಲ: ಇಬ್ಬರ ಬಂಧನ

ಪಿಟಿಐ
Published 28 ಫೆಬ್ರುವರಿ 2026, 14:26 IST
Last Updated 28 ಫೆಬ್ರುವರಿ 2026, 14:26 IST
...
...   

ಚಂಡೀಗಢ: ವಿದೇಶಿ ಮೂಲದ ಭಯೋತ್ಪಾದಕ ಜಾಲವೊಂದನ್ನು ಭೇದಿಸಿದ ಪಂಜಾಬ್‌ ಪೊಲೀಸರು ಇಬ್ಬರು ಆರೊಪಿಗಳನ್ನು ಬಂಧಿಸಿದ್ದಾರೆ. ಇದರ ಜೊತೆಗೆ ಕಚ್ಚಾಬಾಂಬ್‌ ಅನ್ನು ವಶಪಡಿಸಿಕೊಂಡಿದ್ದಾರೆ.

‘ಗುಪ್ತಚರ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪ್ರಮುಖ ಭಯೋತ್ಪಾದಕ ದಾಳಿಯ ಸಂಚನ್ನು ವಿಫಲಗೊಳಿಸಲಾಗಿದೆ’ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

‘ವಶಪಡಿಸಿಕೊಳ್ಳಲಾದ ಎರಡು ಕೆ.ಜಿ ತೂಕದ ಕಚ್ಚಾಬಾಂಬ್‌ಗೆ ಆರ್‌ಡಿಎಕ್ಸ್‌ ತುಂಬಿಸಲಾಗಿತ್ತು. ಅದಕ್ಕೆ ರಿಮೋಟ್‌ ಮತ್ತು ಟೈಮರ್‌ ಅನ್ನು ಅಳವಡಿಸಲಾಗಿತ್ತು. ಇದರೊಂದಿಗೆ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಆರೋಪಿಗಳಿಬ್ಬರು ವಿದೇಶಿ ಮೂಲದ ವ್ಯಕ್ತಿಗಳ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದರು. ಬಾಂಬ್‌ ಸಂಪೂರ್ಣವಾಗಿ ಸಿದ್ಧವಾಗಿತ್ತು. ಸಾರ್ವಜನಿಕ ಸುರಕ್ಷತೆಗೆ ಹಾನಿಯಾಗುವ ಸಾಧ್ಯತೆ ಇತ್ತು’ ಎಂದು ಪೊಲೀಸರು ಹೇಳಿದ್ದಾರೆ.

‘ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಜಾಲದ ಹಣಕಾಸು ಮೂಲ ಮತ್ತು ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.