ADVERTISEMENT

ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲ ಭೇದಿಸಿದ ಪಂಜಾಬ್‌ ಪೊಲೀಸ್‌

ಪಿಟಿಐ
Published 15 ಜುಲೈ 2024, 14:22 IST
Last Updated 15 ಜುಲೈ 2024, 14:22 IST
   

ಚಂಡೀಗಢ: ಅಂತರರಾಜ್ಯ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲ ಭೇದಿಸಿರುವ ಪಂಜಾಬ್‌ ಪೊಲೀಸರು, ಕೆನಡಾ ಮೂಲದ ಭಯೋತ್ಪಾದಕ ಲಖ್ಬೀರ್‌ ಸಿಂಗ್‌ ಅಲಿಯಾಸ್‌ ಲಂಡಾನ ಇಬ್ಬರು ಆಪ್ತರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು. 

‘ಇದು ಗುಪ್ತಚರ ಮಾಹಿತಿ ಆಧರಿತ ಕಾರ್ಯಾಚರಣೆಯಾಗಿದ್ದು, ಆರೋಪಿಗಳಿಂದ ಆರು ಪಿಸ್ತೂಲ್‌ಗಳು, ಗುಂಡುಗಳು ಮತ್ತು ಇತರ ಶಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅಮೃತಸರದ ರಾಜ್ಯ ವಿಶೇಷ ಕಾರ್ಯಾಚರಣೆ ಘಟಕದಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಡಿಜಿಪಿ ಗೌರವ್‌ ಯಾದವ್‌ ಹೇಳಿದ್ದಾರೆ.

ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಮತ್ತು ಮಧ್ಯಪ್ರದೇಶದಿಂದ ಕಾರ್ಯಾಚರಿಸುತ್ತಿರುವ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.