ADVERTISEMENT

ಸಿಧು, ಮಜಿಥಿಯಾ ಜನ ಸಾಮಾನ್ಯರ ವಿಚಾರಗಳನ್ನು ತುಳಿಯುತ್ತಿರುವ ಆನೆಗಳು: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 9:58 IST
Last Updated 30 ಜನವರಿ 2022, 9:58 IST
ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌   

ಅಮೃತಸರ:ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಕ್ಷದ ನಾಯಕ ಬಿಕ್ರಮ್‌ ಸಿಂಗ್‌ ಮಜಿಥಿಯಾ ಅವರುಜನ ಸಾಮಾನ್ಯರ ವಿಚಾರಗಳನ್ನು ತುಳಿಯುತ್ತಿರುವ ʼರಾಜಕೀಯದ ದೊಡ್ಡ ಆನೆಗಳುʼ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ.

ಸಿಧು ಹಾಗೂ ಮಜಿಥಿಯಾ ಅವರುಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿಅಮೃತಸರ ಪೂರ್ವ ಕ್ಷೇತ್ರದಿಂದ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿಯುತ್ತಿದ್ದಾರೆ.

ಚುನಾವಣೆಯನ್ನುದ್ದೇಶಿಸಿ ಮಾತನಾಡಿರುವ ಕೇಜ್ರಿವಾಲ್‌,ʼಇವರಿಬ್ಬರೂ (ಸಿಧು ಹಾಗೂ ಮಜಿಥಿಯಾ) ರಾಜಕೀಯದ ದೊಡ್ಡ ಆನೆಗಳಾಗಿದ್ದು, ಜನಸಾಮಾನ್ಯರ ಸಮಸ್ಯೆಗಳು ಇವರ ಪಾದದಡಿಯಲ್ಲಿ ಸಿಲುಕಿ ಪುಡಿಪುಡಿಯಾಗಿವೆ. ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುತ್ತಿರುವ ಎಎಪಿ ಅಭ್ಯರ್ಥಿ ಜೀವನ್‌ಜೋತ್ಮಾತ್ರವೇ ಗೆಲುವು ಸಾಧಿಸಲಿದ್ದಾರೆʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಸಿಧು ಇಲ್ಲಿನ ಜನರಿಗೆ ಏನೂ ಮಾಡಿಲ್ಲ. ಅಮೃತಸರ ಪೂರ್ವ ಕ್ಷೇತ್ರಕ್ಕಾಗಿ ಕೆಲಸ ಮಾಡದಮಜಿಥಿಯಾ, ಸಿಧು ಅವರನ್ನು ಸೋಲಿಸುವುದಕ್ಕಾಗಿ ಆಗಮಿಸಿದ್ದಾರೆ ಅಷ್ಟೇ ಎಂದು ದೆಹಲಿ ಸಿಎಂ ಕಿಡಿಕಾರಿದ್ದಾರೆ.

ʼಬೇರೆಬೇರೆ ರಾಜಕೀಯ ಪಕ್ಷಗಳಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿರುವ ಸಾಕಷ್ಟು ಉತ್ತಮ ಅಭ್ಯರ್ಥಿಗಳು ಇದ್ದಾರೆ. ನಮ್ಮ ಪಕ್ಷಕ್ಕೆ ಬರುವಂತೆ ಅವರೆಲ್ಲರಿಗೂ ಕೇಳಿಕೊಳ್ಳುತ್ತೇನೆ. ನಮ್ಮ ಪಕ್ಷದಭಗವಂತ ಮಾನ್‌ ಅವರು ಶ್ರಮಜೀವಿ ಮತ್ತು ಪ್ರಮಾಣಿಕ ಎಂದು ನಾನು ಹೇಳಿದರೆ, ವಿರೋಧಿಗಳು ಕೆಟ್ಟದಾಗಿ ಭಾವಿಸುತ್ತಾರೆ. ಏಕೆಂದರೆ ಅವರೆಲ್ಲ ಭ್ರಷ್ಟರುʼ ಎಂದು ಟೀಕಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿಎಎಪಿಯು ಬಿಜೆಪಿಯಭಾಗವಾಗಿ ಕಣಕ್ಕಿಳಿಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್‌, ಚನ್ನಿ (ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ) ಸಾಹೇಬರ ಮೇಲೆ ಇ.ಡಿ ದಾಳಿ ಮಾಡಿಸುವಂತೆನಾನು ಬಿಜೆಪಿಯವರಿಗೆ ಹೇಳಿದ್ದೇನೆಯೇ? ನಾನು ಅಷ್ಟು ಶಕ್ತಿಶಾಲಿಯಾಗಿದ್ದರೆ, ಮತ್ತಷ್ಟು ಸಲ ಇ.ಡಿ ದಾಳಿ ನಡೆಸುವಂತೆ ಸೂಚಿಸುತ್ತಿದ್ದೆʼ ಎಂದು ತಿರುಗೇಟು ನೀಡಿದ್ದಾರೆ.

ಹಾಗೆಯೇ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ, ಕೊಳಕು ರಾಜಕೀಯವು ವ್ಯವಸ್ಥೆಯ ಮೇಲೆ ಪ್ರಭುತ್ವ ಸಾಧಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆಫೆಬ್ರುವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್‌ 10ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.