ADVERTISEMENT

ನಿಹಾಂಗರಿಂದ ಅಪ್ರಚೋದಿತ ಗುಂಡಿನ ದಾಳಿ: ಒಬ್ಬ ಸಾವು, ನಾಲ್ವರು ಪೊಲೀಸರಿಗೆ ಗಾಯ

ಪಿಟಿಐ
Published 23 ನವೆಂಬರ್ 2023, 23:51 IST
Last Updated 23 ನವೆಂಬರ್ 2023, 23:51 IST
<div class="paragraphs"><p>ಕಪೂರ್ತಲಾ ಜಿಲ್ಲೆಯ ಸುಲ್ತಾನಪುರ ಲೋಧಿ ಪ್ರದೇಶದಲ್ಲಿರುವ ಗುರುದ್ವಾರ ಅಕಾಲ್‌ ಬಂಗಾ ಸಾಹಿಬ್‌ ಬಳಿ ಗುರುವಾರ ನಿಹಾಂಗ ಪಂಥಕ್ಕೆ ಸೇರಿದ ಗುಂಪೊಂದು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು  </p></div>

ಕಪೂರ್ತಲಾ ಜಿಲ್ಲೆಯ ಸುಲ್ತಾನಪುರ ಲೋಧಿ ಪ್ರದೇಶದಲ್ಲಿರುವ ಗುರುದ್ವಾರ ಅಕಾಲ್‌ ಬಂಗಾ ಸಾಹಿಬ್‌ ಬಳಿ ಗುರುವಾರ ನಿಹಾಂಗ ಪಂಥಕ್ಕೆ ಸೇರಿದ ಗುಂಪೊಂದು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು

   

–ಪಿಟಿಐ ಚಿತ್ರ

ಸುಲ್ತಾನಪುರ ಲೋಧಿ(ಪಂಜಾಬ್): ಪಂಜಾಬ್‌ನ ಕಪೂರ್ತಲಾದಲ್ಲಿ ಗುರುವಾರ ನಿಹಾಂಗ್‌ ಪಂಥದ ಗುಂಪೊಂದು ಅಪ್ರಚೋದಿತವಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಮೃತಪಟ್ಟು, ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.

ADVERTISEMENT

ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಪೂರ್ತಲಾದಲ್ಲಿರುವ ಗುರುದ್ವಾರ ಅಕಾಲ್ ಬಂಗಾ ಸಾಹಿಬ್‌ನ ಮೆರವಣಿಗೆ ನಡೆಸುವ ವಿಚಾರದಲ್ಲಿ ನಿಹಾಂಗರ ಎರಡು ಗುಂಪು ನಡುವಿನ ವಿವಾದವೇ ಈ ದುರ್ಘಟನೆಗೆ ಕಾರಣ ಎಂದು ವಿಶೇಷ ಡಿಜಿಪಿ ಅರ್ಪಿತ್‌ ಶುಕ್ಲಾ ಹೇಳಿದ್ದಾರೆ.

ಬಾಬಾ ಮಾನಸಿಂಗ್ ನೇತೃತ್ವದ ನಿಹಾಂಗರನ್ನು ಗುರುದ್ವಾರದಿಂದ ಹೊರಗೆ ಕಳಿಸಲು ಪೊಲೀಸರು ಮುಂದಾದಾಗ, ಅಲ್ಲಿದ್ದ ನಿಹಾಂಗರ ಗುಂಪೊಂದು ಪೊಲೀಸರತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಕೊಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಶುಕ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.