ADVERTISEMENT

Puri Jagannath Rath Yatra 2023: ಜಗನ್ನಾಥ ರಥಯಾತ್ರೆ; ಶುಭ ಹಾರೈಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜೂನ್ 2023, 3:06 IST
Last Updated 20 ಜೂನ್ 2023, 3:06 IST
ಪುರಿ ಜಗನ್ನಾಥ ದೇವಾಲಯ
ಪುರಿ ಜಗನ್ನಾಥ ದೇವಾಲಯ   

ಪುರಿ: ಶ್ರೀ ಜಗನ್ನಾಥ ರಥಯಾತ್ರೆಯ ಉತ್ಸವ ಕಾರ್ಯಕ್ರಮಗಳು ಇಂದಿನಿಂದ ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.

ಎಲ್ಲರಿಗೂ ಜಗನ್ನಾಥ ರಥಯಾತ್ರೆಯ ಶುಭಾಶಯಗಳು. ಈ ಪವಿತ್ರ ರಥಯಾತ್ರೆಯ ಆಚರಣೆಯ ಸಂದರ್ಭದಲ್ಲಿ, ಜಗನ್ನಾಥನ ದಿವ್ಯ ಪ್ರಯಾಣವು ನಮ್ಮ ಬದುಕನ್ನು ಆರೋಗ್ಯ, ಸಂತೋಷ ಮತ್ತು ಆಧ್ಯಾತ್ಮಿಕತೆಯಿಂದ ತುಂಬಿರಲಿ ಎಂದು ಹಾರೈಸಿದ್ದಾರೆ.

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಈ ಬಾರಿ 25 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ADVERTISEMENT

ಕೇಂದ್ರ ಸಚಿವಾರ ಅಶ್ವಿನ್ ವೈಷ್ಣವ್ ಮತ್ತು ಧರ್ಮಂದ್ರ ಪ್ರಧಾನ್ ಅವರು ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.

ಗುಜರಾತ್‌ನಲ್ಲಿ ರಥಯಾತ್ರೆಗೂ ಮುನ್ನ ಜಗನ್ನಾಥ ದೇವಸ್ಥಾನದಲ್ಲಿ ನಡೆದ ಮಂಗಳ ಆರತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.