ADVERTISEMENT

ಗೃಹ ಬಂಧನದಲ್ಲಿರಿಸಿ ಪ್ರಾರ್ಥನೆ ಸಲ್ಲಿಸದಂತೆ ತಡೆದಿದ್ದಾರೆ: ಉಮರ್ ಫಾರೂಕ್ ಆರೋಪ

ಪಿಟಿಐ
Published 13 ಡಿಸೆಂಬರ್ 2024, 9:23 IST
Last Updated 13 ಡಿಸೆಂಬರ್ 2024, 9:23 IST
<div class="paragraphs"><p>ಮಿರ್ವೈಜ್ ಉಮರ್ ಫಾರೂಕ್</p></div>

ಮಿರ್ವೈಜ್ ಉಮರ್ ಫಾರೂಕ್

   

ಶ್ರೀನಗರ: ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದ್ದು, ಜಾಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸದಂತೆ ತಡೆಯಲಾಗಿದೆ ಎಂದು ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಹಾಗೂ ಮುಸ್ಲಿಂ ಚಿಂತಕ ಮಿರ್ವೈಜ್ ಉಮರ್ ಫಾರೂಕ್ ಆರೋಪಿಸಿದ್ದಾರೆ.

ಶ್ರೀನಗರ ನಗರದ ನೌಹಟ್ಟಾ ಪ್ರದೇಶದಲ್ಲಿರುವ ಜಾಮಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಸತತ ಎರಡನೇ ಶುಕ್ರವಾರವೂ ನಿರ್ಬಂಧ ವಿಧಿಸಿದಂತಾಗಿದೆ. ಫಾರೂಕ್ ಆರೋಪದ ಬಗ್ಗೆ ಪೊಲೀಸರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

‘ಸತತ ಎರಡನೇ ಶುಕ್ರವಾರವೂ ಜಾಮಾ ಮಸೀದಿಗೆ ಹೋಗುವುದನ್ನು ಮತ್ತೆ ನಿಷೇಧಿಸಲಾಗಿದೆ. ಜನರ ಸಮಸ್ಯೆ ಅಳಿಸುವುದು ನನ್ನ ಕರ್ತವ್ಯವಾಗಿದೆ. ಆದರೆ, ಇದರಿಂದ ಗೊಂದಲ ಮತ್ತು ಅನಾನುಕೂಲತೆಯನ್ನು ಉಂಟಾಗಲಿದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ’ ಎಂದು ಉಮರ್ ಫಾರೂಕ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ನನ್ನನ್ನು ಗೃಹಬಂಧನದಲ್ಲಿ ಇರಿಸುವ ಮೂಲಕ ಸಮಸ್ಯೆಗಳು ಕಣ್ಮರೆಯಾಗುತ್ತವೆ ಮತ್ತು ವಾಸ್ತವವು ಬದಲಾಗುತ್ತದೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ, ನನ್ನ ಗೃಹಬಂಧನ ಮತ್ತು ಸರ್ವಾಧಿಕಾರಿ ಮನಸ್ಥಿತಿಗೆ ಬಲಿಯಾದ ಸಾವಿರಾರು ಕಾಶ್ಮೀರಿ ಕೈದಿಗಳ ಜೈಲುವಾಸವನ್ನು ಬಲವಾಗಿ ಖಂಡಿಸುತ್ತೇನೆ’ ಎಂದು ಫಾರೂಕ್ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.