ADVERTISEMENT

ವಿಷಯವಾರು ರ್‍ಯಾಂಕಿಂಗ್ ಪಟ್ಟಿಯಲ್ಲಿ ಐಐಎಂಬಿ, ಜೆಎನ್‌ಯು

ಪಿಟಿಐ
Published 12 ಮಾರ್ಚ್ 2025, 15:42 IST
Last Updated 12 ಮಾರ್ಚ್ 2025, 15:42 IST
ಜೆಎನ್‌ಯು
ಜೆಎನ್‌ಯು   

ನವದೆಹಲಿ: ಲಂಡನ್ ಮೂಲದ ಕ್ವಕ್ವರೆಲಿ ಸಿಮಂಡ್ಸ್ (ಕ್ಯೂಎಸ್‌) ಪ್ರಕಟಿಸಿರುವ ವಿಷಯವಾರು ರ್‍ಯಾಂಕ್ ಪಟ್ಟಿಯಲ್ಲಿ, ವಿಶ್ವದ ಟಾಪ್–50 ಸಂಸ್ಥೆಗಳ ಜೊತೆ ಭಾರತ ಒಂಬತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ.

ಕ್ಯೂಎಸ್‌ ಸಂಸ್ಥೆಯು ‘ಜಗತ್ತಿನ ವಿಶ್ವವಿದ್ಯಾಲಯಗಳ ವಿಷಯವಾರು ರ್‍ಯಾಂಕಿಂಗ್’ ಪಟ್ಟಿಯ 15ನೆಯ ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ರ್‍ಯಾಂಕ್ ಪಟ್ಟಿಗೆ ಭಾರತದ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಹೊಸದಾಗಿ ಸೇರ್ಪಡೆ ಆಗಿರುವುದು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ದೇಶವು ಬೆಳವಣಿಗೆ ಸಾಧಿಸುತ್ತಿರುವುದನ್ನು ಹೇಳುತ್ತಿದೆ ಎಂದು ಕ್ಯೂಎಸ್ ಸಂಸ್ಥೆಯ ಪ್ರಕಟಣೆ ಹೇಳಿದೆ.

ADVERTISEMENT

ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಸಂಸ್ಥೆಗಳು

ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ (ಧನಬಾದ್), ಐಐಟಿ ಬಾಂಬೆ, ಐಐಟಿ ಖರಗ್‌ಪುರ, ಐಐಟಿ ದೆಹಲಿ, ಐಐಟಿ ಬಾಂಬೆ, ಐಐಎಂ ಅಹಮದಾಬಾದ್, ಐಐಎಂ ಬೆಂಗಳೂರು, ಐಐಟಿ ಮದ್ರಾಸ್, ಜೆಎನ್‌ಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.