ADVERTISEMENT

ಮುಂಬೈಗೆ ಬಂದಿಳಿದ 572 ಭಾರತೀಯರಿಗೆ ಕ್ವಾರಂಟೈನ್‌

ಪಿಟಿಐ
Published 10 ಮೇ 2020, 19:45 IST
Last Updated 10 ಮೇ 2020, 19:45 IST
   

ಮುಂಬೈ: ಲಾಕ್‌ಡೌನ್‌ನಿಂದ ವಿದೇಶದಲ್ಲಿ ಸಿಲುಕಿದ್ದ 572 ಮಂದಿ ಭಾನುವಾರ ಬೆಳಿಗ್ಗೆ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಲಂಡನ್‌ ಮತ್ತು ಸಿಂಗಪುರದಿಂದ ಎರಡು ವಿಮಾನಗಳಲ್ಲಿ ಈ ಪ್ರಯಾಣಿಕರು ಆಗಮಿಸಿದರು. ವಿಮಾನ ನಿಲ್ದಾಣದಲ್ಲೇ ಎಲ್ಲರನ್ನೂ ಕೇಂದ್ರ ಸರ್ಕಾರದ ನಿರ್ದೇಶನದಂತೆ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಇವರಲ್ಲಿ ಬಹುತೇಕ ಪ್ರಯಾಣಿಕರು ಮುಂಬೈ ನಿವಾಸಿಗಳು. ಕೆಲವರು ಪುಣೆ, ಧುಲೆ, ಕೊಲ್ಹಾಪುರ ನಗರದವರಾಗಿದ್ದಾರೆ.

ಮುಂಬೈ ನಿವಾಸಿಗಳನ್ನು ಕ್ವಾರಂಟೈನ್‌ಗಾಗಿ ವಿಮಾನ ನಿಲ್ದಾಣ ಸಮೀಪದ ಹೋಟೆಲ್‌ಗಳಿಗೆ ಕರೆದೊಯ್ಯಲಾಯಿತು. ಇತರ ನಗರಗಳ ಪ್ರಯಾಣಿಕರನ್ನು ಆಯಾ ಸ್ಥಳಗಳಿಗೆ ಕರೆದೊಯ್ದು ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿರುವ ಹೋಟೆಲ್‌ಗಳಲ್ಲಿ ಇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.