ADVERTISEMENT

ತಾಯಿ ರೀತಿ ನಾನೂ ದೇಶ ಸೇವೆ ಮಾಡುವೆ: ಐತಿಹಾಸಿಕ ಭಾಷಣದಲ್ಲಿ ರಾಜ ಚಾರ್ಲ್ಸ್

ದೇಶವನ್ನುದ್ದೇಶಿಸಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ರಾಜ ಚಾರ್ಲ್ಸ್

ಪಿಟಿಐ
Published 9 ಸೆಪ್ಟೆಂಬರ್ 2022, 19:07 IST
Last Updated 9 ಸೆಪ್ಟೆಂಬರ್ 2022, 19:07 IST
ರಾಜ ಚಾರ್ಲ್ಸ್
ರಾಜ ಚಾರ್ಲ್ಸ್   

ಲಂಡನ್: ಬ್ರಿಟನ್ ರಾಣಿ ಎಲಿಜೆಬೆತ್ ಅವರು ಉತ್ತಮವಾಗಿ ಜೀವಿಸಿದ್ದರು ಎಂದು ಅವರ ಪುತ್ರ ಹಾಗೂ ಮಹಾರಾಣಿಯ ಉತ್ತರಾಧಿಕಾರಿ ಚಾರ್ಲ್ಸ್ ಅವರು ಪ್ರತಿಪಾದಿಸಿದ್ದಾರೆ.

ರಾಣಿಯನ್ನು ಕಳೆದುಕೊಂಡ ದುಃಖದಲ್ಲಿರುವ ಬ್ರಿಟನ್ ದೇಶದ ಜನತೆಯನ್ನುದ್ದೇಶಿಸಿ ಭಾಷಣ ರಾಜ ಚಾರ್ಲ್ಸ್ 3 ಅವರು, ‘ಪ್ರೀತಿಯ ತಾಯಿ ವಾತ್ಸಲ್ಯ, ಮಾರ್ಗದರ್ಶನಕ್ಕೆ ಧನ್ಯವಾದಗಳು. ಸುದೀರ್ಘ ಆಡಳಿತ ನಡೆಸಿದ ತನ್ನ ತಾಯಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ‘ ಎಂದರು.

ನಮ್ಮ ಈ ದುಃಖದಲ್ಲಿ ನಾವು ರಾಣಿಯನ್ನು ನೆನಪಿಸಿಕೊಳ್ಳೋಣ. ಆಕೆಯ ಉದಾಹರಣೆಯ ಬೆಳಕಿನ ಶಕ್ತಿಯನ್ನು ಪಡೆದುಕೊಳ್ಳೋಣ ಎಂದ ಅವರು, ಬ್ರಿಟನ್ ಹಾಗೂ ಕಾಮನ್ ವೆಲ್ತ್‌ಗೆ ನಿಷ್ಠೆ ಹಾಗೂ ಗೌರವದಿಂದ ಸೇವೆ ಸಲ್ಲಿಸುವುದಾಗಿ ತಮ್ಮ ಐತಿಹಾಸಿಕ ಭಾಷಣದಲ್ಲಿ ದೇಶದ ಜನತೆಗೆ ವಾಗ್ದಾನ ನೀಡಿದರು.

ADVERTISEMENT

ತಮ್ಮ ತಾಯಿಯ ರೀತಿಯೇ ದೇವರು ನನಗೆ ಶಕ್ತಿ ನೀಡುವಷ್ಟು ಕಾಲ ರಾಷ್ಟ್ರದ ಹೃದಯಭಾಗವಾಗಿರುವ ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯಲು ಪ್ರತಿಜ್ಞೆ ಮಾಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.